7
ಬೆಂಗಳೂರು ವಿವಿ ಕುಲಪತಿ ಐ.ಎಸ್. ಶಿವಕುಮಾರ್

ವಿಜ್ಞಾನದ ಅವಿಭಾಜ್ಯ ಅಂಗ ಗಣಿತ

Published:
Updated:
ಹಾಸನದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಣಿತ ತರಬೇತಿ ಶಿಬಿರವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಐ.ಎಸ್. ಶಿವಕುಮಾರ್ ಉದ್ಘಾಟಿಸಿದರು.

ಹಾಸನ : ಗಣಿತ ವಿಜ್ಞಾನದ ಅವಿಭಾಜ್ಯ ಅಂಗ ಎಂದರೆ ತಪ್ಪಿಲ್ಲ. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗೆ ತಿಳಿಯದಿದ್ದರೂ ತಾಂತ್ರಿಕ ಶಿಕ್ಷಣ ಪ್ರವೇಶಿಸಿದಾಗ ಸ್ವಲ್ಪ ಮಟ್ಟಿಗೆ ಅರಿವಾಗುವುದು ಸಹಜ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಐ.ಎಸ್. ಶಿವಕುಮಾರ್ ಹೇಳಿದರು.

ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಣಿತ ತರಬೇತಿ ಶಿಬಿರದಲ್ಲಿ ಮಾತನಾಡಿದರು. ದೊಡ್ಡ ವಿಜ್ಞಾನಿಗಳು (ಐಐಟಿ, ಐಎಎಸ್ಇ) ಹೇಳುವ ಪ್ರಕಾರ ಗಣಿತ ವಿಜ್ಞಾನವನ್ನು ತಾಂತ್ರಿಕ ಉಪನ್ಯಾಸಕ ಅಥವಾ ಗಣಿತ ವಿಜ್ಞಾನದ ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಲು ತರಬೇತಿಯ ಅವಶ್ಯಕತೆ ಇದೆ ಎಂದು ತಿಳಿಸಿದರು.

ಗಣಿತ ಎಂದರೆ ಮುಂದಿನ ಭವಿಷ್ಯ ಹೇಳಬಲ್ಲ ಸಾಧನ. ಎಂಜಿನಿಯರಿಂಗ್ ನ ಯಾವುದೇ ವಿಭಾಗದಲ್ಲಿ ಅಧ್ಯಯನ ನಡೆಸಿದರೂ ಗಣಿತ ಪ್ರಮುಖ ಪಾತ್ರ ವಹಿಸುತ್ತದೆ. ವಿಜ್ಞಾನಿಗಳು ಸಹ ಯಾವುದೇ ಸಾಧನೆ ಮಾಡಬೇಕಾದರೆ ಈ ವಿಷಯ ಅಗತ್ಯ ಎಂದರು. ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಜಯಂತ್ ಮಾತನಾಡಿ, ಹೊಸ ಆವಿಷ್ಕಾರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ನೀಡಲು ಉಪನ್ಯಾಸಕರಿಗೆ ಪರಿಣತರಿಂದ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತುದಾರರು, ದೇಶದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಆಯ್ಕೆಯಾದ ಉಪನ್ಯಾಸಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಶಿಬಿರ ಆಯೋಜಕರಾದ ಗುರುರಾಜ್, ಜಿ.ಕೆ. ಕವಿತಾ, ಎಚ್.ರಘು, ಸಿ.ಎಂ. ಚೈತ್ರಾ ಹಾಗೂ ಗಣಿತ ವಿಜ್ಞಾನ ವಿಭಾಗ ಮುಖ್ಯಸ್ಥ ಎಂ.ಕೆ. ಪಾರ್ಥ, ಎಲ್.ಎಸ್. ಭರತನಾರಾಯಣ್, ಟಿ. ರೇವಣ್ಣ, ಕಮೇಶ್ವರ್ ಗೋಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !