ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ | ಪ್ರತಿಷ್ಠಾಪನೆಗೆ ಸಜ್ಜಾದ ಬೈರಾಬುಂದಿ

ವಿಮಾನ ಗೋಪುರ, ಕಳಸ ಸಂಪ್ರೋಕ್ಷಣೆ ಮಹೋತ್ಸವ 11 ರಿಂದ
ಎ.ಎಸ್. ರಮೇಶ್‌
Published : 6 ಆಗಸ್ಟ್ 2024, 5:53 IST
Last Updated : 6 ಆಗಸ್ಟ್ 2024, 5:53 IST
ಫಾಲೋ ಮಾಡಿ
Comments

ಅರಸೀಕೆರೆ: ಸುಕ್ಷೇತ್ರ ಬೈರಾಂಬುದಿ ಹಾಗೂ 12 ಹಳ್ಳಿಯ ಆರಾಧ್ಯ ದೇವತೆ ಹೊಂಗ್ಯಮ್ಮ, ಮಲ್ಲಿಗಮ್ಮ ದೇವಿ ಹಾಗೂ ಭಕ್ತರ ಕಷ್ಟಗಳನ್ನು ನಿವಾರಿಸುವ ಚೆಲುವರಾಯ, ದೂತರಾಯ ಸ್ವಾಮಿ  ದೇಗುಲ  ಜೀರ್ಣೋದ್ಧಾರಗೊಂಡಿದ್ದು,  ವಿಮಾನಗೋಪುರ, ಕಳಸ ಪ್ರತಿಷ್ಠಾಪನಾ ಮಹೋತ್ಸವವು ಆ. 11 ಮತ್ತು 12 ರಂದು ನಡೆಯಲಿವೆ.

ಆ.11 ರಂದು ಸಂಜೆ ಗಂಗಾಪೂಜೆ, ವಾಸ್ತುಹೋಮ, ಕಳಸಾರಾಧನೆ , ಹೋಮ, ಪೂರ್ಣಹುತಿ ನಡೆಯಲಿವೆ. ಆ.12 ರಂದು ನಸುಕಿನಲ್ಲಿ ಪ್ರಧಾನ ಹೋಮ ಬೆಳಿಗ್ಗೆ 6.55 ರಿಂದ ಕೇದಿಗೆಮಠ ಕೋಳಗುಂದ ಜಯಚಂದ್ರಶೇಖರ ಸ್ವಾಮೀಜಿ ಅವರಿಂದ ಕಲಶ ಪ್ರತಿಷ್ಠೆ, ಪೂರ್ಣಾಹುತಿ, ಬಲಿ, ಕಲಶಾಭಿಷೇಕ, ಮಹಾಮಂಗಳಾರತಿ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ಆ. 12 ರಂದು ಸಂಜೆ ಉತ್ಸವ ಮೂರ್ತಿಗಳಾದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಯಾದಾಪುರ, ಜವರಲಿಂಗೇಶ್ವರ ಸ್ವಾಮಿ ಜವನಹಳ್ಳಿ, ಮರುಳಸಿದ್ದೇಶ್ವರ ಸ್ವಾಮಿ ಬಸವೇಶ್ವರ ಸ್ವಾಮಿ ಬೆಂಡೇಕೆರೆ, ಹಾಲುಸಿದ್ದೇಶ್ವರ ಸ್ವಾಮಿ ಬಸವೇಶ್ವರ ಸ್ವಾಮಿ ಹಿರಿಯೂರು, ಹಾಲುಸಿದ್ದೇಶ್ವರ ಸ್ವಾಮಿ, ಮಲ್ಲಿಗೆಮ್ಮ ದೇವಿ ಬಿಸಲೇಹಳ್ಳಿ, ರಂಗನಾಥಸ್ವಾಮಿ ಬೆಟ್ಟದಪುರ, ರಂಗನಾಥಸ್ವಾಮಿ ಸಂಕೋಡನಹಳ್ಳಿ, ಕರಿಯಮ್ಮ ದೇವಿ ಹೊಸ ಕಲ್ಲನಾಯ್ಕನಹಳ್ಳಿ, ಆಂಜನೇಯಸ್ವಾಮಿ ಬೈರಾಂಬುದಿ ದೇವರನ್ನು ತರಲಾಗುತ್ತಿದ್ದು, ಮೆರವಣಿಗೆ ಉತ್ಸವ ಇರುತ್ತದೆ.  ಉತ್ಸವಗಳಲ್ಲಿ ಚೆಲುವರಾಯ, ದೂತರಾಯ ಸ್ವಾಮಿಯವರ ಕುಣಿತ ಆಕರ್ಷಣೀಯವಾಗಿರುತ್ತದೆ.

ಅರಸೀಕೆರೆ ನಗರದಿಂದ ಬಸ್‌ ಸೌಕರ್ಯವಿದೆ, ಅಂಚೆಕೊಪ್ಪಲು, ಕಾಟೀಕೆರೆ, ಸಂಕೊಡನಹಳ್ಳಿ, ಬೈರಾಂಬುದಿ ಅಥವಾ ಜಾಜೂರು, ಹಳೇ ಕಲ್ಲನಾಯ್ಕನಹಳ್ಳಿ, ಲಾಯಲಾಪುರ, ಚಿಕ್ಕೂರು ಬಿಸಲೇಹಳ್ಳಿ ಗ್ರಾಮಗಳ ಮುಖಾಂತರ ಬೈರಾಂಬುದಿ ಕ್ಷೇತ್ರಕ್ಕೆ ಬರಬಹುದು.

ಆ.11 ಮತ್ತು 12 ರಂದು ನಡೆಯುವ ಮಹೋತ್ಸವವು ಸಹಸ್ರಾರು ಭಕ್ತರು ಹತ್ತಾರು ದೇವರುಗಳ ಸಮ್ಮುಖದಲ್ಲಿ ನಡೆಯಲಿದ್ದು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಎಸ್.ಟಿ.ಸಿದ್ದಯ್ಯ (ಸ್ವಾಮಿ), ವ್ಯವಸ್ಥಾಪನ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT