ಹೊಳೆನರಸೀಪುರ: ತಾಲ್ಲೂಕಿನ ಪರಸನಹಳ್ಳಿ ಗೇಟ್ ಸಮೀಪ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಲು ಅನುಮತಿ ನೀಡುವುದನ್ನು ವಿರೋಧಿಸಿ 100ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯ್ತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು, ಒಂದು ವೇಳೆ ಅನುಮತಿ ಕೊಡುವುದಿದ್ದರೆ ಮೊದಲು ನಮಗೆ ವಿಷಕೊಡಿ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಮಳಲಿ ಗ್ರಾಮದ ಜಯಮ್ಮ ಮಾತನಾಡಿ, ಮಳಲಿ ಗ್ರಾ.ಪಂ. ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಮದ್ಯದಂಗಡಿ ಬೇಡವೆಂದು 30 ವರ್ಷಗಳ ಹಿಂದೆ ಪ್ರತಿಭಟನೆ ನಡೆಸಿ, ಮದ್ಯದಂಗಡಿ ತೆರೆಯದಂತೆ ಹೋರಾಟ ಮಾಡಿದ್ದೆವು, 30 ವರ್ಷದಿಂದ ತೆರೆದಿರಲಿಲ್ಲ. ಆದರೆ ಕೆಲವು ಪ್ರಭಾವಿಗಳು ಈಗ ಮತ್ತೆ ಮದ್ಯದಂಗಡಿ ತೆರೆಯಲು ಪದೇ ಪದೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಒತ್ತಡ ಹಾಕುತ್ತಿದ್ದಾರೆ. ಒತ್ತಡಕ್ಕೆ ಮಣಿದು ಅನುಮತಿ ನೀಡುವ ನಿರ್ಣಯ ಕೈಗೊಳ್ಳುವ ಮುನ್ನ ನಮಗೆಲ್ಲ ವಿಷ ಕೊಟ್ಟು ಸಾಯಿಸಿಬಿಡಿ, ನಂತರ ಎಲ್ಲರಿಗೂ ದಿನಾ ಮದ್ಯಕೊಟ್ಟು, ನಿಧಾನವಾಗಿ ಸಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳಲಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರಾದ ಪುಟ್ಟಸ್ವಾಮಿಗೌಡರು, ಗ್ರಾ.ಪಂ. ಸದಸ್ಯರಾದ ರಕ್ಷಿತ್ ಮಳಲಿ, ಮೋಹನ, ಮಾವನೂರು ಪ್ರದೀಪ್ ಮದ್ಯದಂಗಡಿಗೆ ಪರವಾನಗಿ ನೀಡೋದು ಬೇಡವೆಂದು ಪಂಚಾಯಿತಿಯಲ್ಲಿ ನಿರ್ಣಯ ಮಾಡಿದ್ದೇವೆ. ನಮ್ಮ ಮೇಲೆ ಒತ್ತಡ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯರಾದ ನಾರಾಯಣಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.