ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ಶೂನ್ಯ ನೆರಳಿನ ಕೌತುಕ

Last Updated 25 ಏಪ್ರಿಲ್ 2021, 4:54 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ಶನಿವಾರ ಸಂಭವಿಸಿದ ಶೂನ್ಯನೆರಳಿನ ಕೌತುಕವನ್ನು ಮಕ್ಕಳು, ಖಗೋಳಾಸಕ್ತರು ಮತ್ತು ಸಾರ್ವಜನಿಕರು ಮನೆಯಂಗಳದಲ್ಲೇ ವೀಕ್ಷಿಸಿದರು.

ಶೂನ್ಯ ನೆರಳಿನ ದಿನದಂದು ಸೂರ್ಯ ನೆತ್ತಿಯ ಮೇಲಿನ ನಿಖರ ಬಿಂದು ತಲುಪಿದಾಗ ನೆರಳು ಗೋಚರಿಸುವುದಿಲ್ಲ. ಈ ವಿಸ್ಮಯವನ್ನು ಶೂನ್ಯ ನೆರಳು ಎನ್ನಲಾಗುತ್ತದೆ. ನಗರದಲ್ಲಿ ಶನಿವಾರ 12.24ಕ್ಕೆ ಸಂಭವಿಸಿದ ಶೂನ್ಯ ನೆರಳು ನೋಡುಗರನ್ನು ಅಚ್ಚರಿಗೊಳಿಸಿತು. ಅಲ್ಲದೇ ಖಗೋಳಶಾಸ್ತ್ರದ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವಂತೆ ಮಾಡಿತು.

ವರ್ಷದಲ್ಲಿ ಎರಡು ಬಾರಿ ಕರ್ಕಾಟಕ ವೃತ್ತ ಮತ್ತು ಮಕರ ವೃತ್ತ ನಡುವಿನ ಭೂಭಾಗದಲ್ಲಿ ಸಂಭವಿಸುತ್ತದೆ. ಈ ಕೌತುಕ ಬೇರೆ ಬೇರೆ ದಿನಗಳಂದು ಬೇರೆ ಬೇರೆ ಭೂಪ್ರದೇಶಗಳಲ್ಲಿ ಸಂಭವಿಸುತ್ತದೆ.

‘ಶೂನ್ಯ ನೆರಳಿನ ದಿನದ ಹೆಚ್ಚಿನ ಅಧ್ಯಯನದ ಅನುಕೂಲಕ್ಕೆ ಸಹಾಯವಾಗಲೆಂದು ಅಲೋಕ್ ಮಾಂಡವಗಣೆ ಸಂಸ್ಥೆಯು ‘ಜಿರೋ ಶ್ಯಾಡೋ ಡೇ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದು, ತಮ್ಮ ಮೊಬೈಲ್ ಫೋನ್‍ಗಳಲ್ಲಿ ಇನ್‍ಸ್ಟಾಲ್ ಮಾಡಿಕೊಂಡು ಸಚಿತ್ರ ಅನಿಮೇಶನ್ ಸಹಿತ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕೋಶಾಧ್ಯಕ್ಷ ಬಿ.ಜಿ.ಗೋಪಾಲಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT