ಸೌಲಭ್ಯವಿಲ್ಲದೆ ಸೊರಗಿದೆ ಹಳ್ಳಿಮೈಸೂರು: ಯೋಗಾ ರಮೇಶ್‌

7

ಸೌಲಭ್ಯವಿಲ್ಲದೆ ಸೊರಗಿದೆ ಹಳ್ಳಿಮೈಸೂರು: ಯೋಗಾ ರಮೇಶ್‌

Published:
Updated:

ಹೊಳೆನರಸೀಪುರ: ತಾಲ್ಲೂಕಿನಲ್ಲಿ ಆರು ದಶಕದಿಂದ ಆಡಳಿತ ನಡೆಸಿದವರು ಹಳ್ಳಿಮೈಸೂರಿಗೆ ಯಾವುದೇ ಸೌಲಭ್ಯ ಕಲ್ಪಿಸದ್ದರಿಂದ ಈ ಹೋಬಳಿ ಇನ್ನೂ ಬಹಳ ಹಿಂದುಳಿದಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾರಮೇಶ್‌ ಆರೋಪಿಸಿದರು.

ತಾಲ್ಲೂಕಿನ ಗುಡ್ಡೇನಹಳ್ಳಿ ಏತನೀರಾವರಿ ಸಮೀಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಏತನೀರಾವರಿ ಯೋಜನೆಯ ಘಟಕದಲ್ಲಿ ವಿದ್ಯುತ್‌ ಪರಿವರ್ತಕಗಳು ಕೆಟ್ಟು 2 ತಿಂಗಳಾಗಿದೆ. 54 ಕೆರೆಗಳಲ್ಲಿ ಇನ್ನೂ ಹತ್ತಾರು ಕೆರೆಗಳು ತುಂಬಿಲ್ಲ. ಅವುಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್‌ ಪರಿವರ್ತಕಗಳನ್ನು ಇನ್ನೂ ಸರಿಪಡಿಸಿಲ್ಲ. ಇದರಿಂದ ಈ ಹೋಬಳಿಯ ರೈತರ ಸಂಕಷ್ಟ ತೀರಿಲ್ಲ ಎಂದು ದೂರಿದರು.

ಈ ಹಿಂದೆ ಕಾಂಗ್ರೆಸ್‌ ಸಚಿವರು ಏನೂ ಮಾಡಲಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಗೆದ್ದಿದೆ. ಆದರೆ ಯಾರೇ ಗೆದ್ದರೂ ಹಳ್ಳಿಮೈಸೂರು ಜನತೆ ಪಾಲಿಗೆ ಮೂಗಿಗೆ ತುಪ್ಪ ಸವರಿ ಹೋಗುತ್ತಿದ್ದಾರೆ. ಈ ಹೋಬಳಿಯ ಮೆಣಗನಹಳ್ಳಿ, ಸೋಮನಹಳ್ಳಿಕೊಪ್ಪಲು, ಏತನೀರಾವರಿ ಘಟಕದ ಪಕ್ಕದಲ್ಲೇ ಇರುವ ಗೆಜ್ಜಗನಹಳ್ಳಿ ಕೆರೆಗಳು ಖಾಲಿ ಉಳಿದಿವೆ. ಅರಕಲಗೂಡು ವ್ಯಾಪ್ತಿಯ ಯಗಟಿ, ರಂಗಾಪುರ ಗ್ರಾಮದಲ್ಲೂ ಕೆರೆಗಳು ಒಣಗಿ ನಿಂತಿದೆ. ಜೂನ್ ತಿಂಗಳಲ್ಲಿ ಅಧಿಕ ಮಳೆಯಾದ್ದರಿಂದ ನಾಲೆಗಳಲ್ಲಿ ನೀರು ಹರಿಸಿದ್ದರು. ಟಿ.ಸಿ. ಕೆಟ್ಟು 2 ತಿಂಗಳಾದರೂ ಬದಲಾಯಿಸಿ ಸೌಲಭ್ಯ ಕಲ್ಪಿಸಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಅರಕಲಗೂಡು ತಾಲ್ಲೂಕು ಮತ್ತು ಹಳ್ಳಿಮೈಸೂರು ಹೋಬಳಿಯಲ್ಲಿ ಬಹುತೇಕ ಹೊಗೆಸೊಪ್ಪು ಬೆಳೆಗಾರರು ಇದ್ದಾರೆ. ಮಳೆ ಇಲ್ಲದೆ. ನಾಲೆಯಲ್ಲಿ ನೀರೂ ಇಲ್ಲದೆ ಪರಿತಪಿಸುವಂತಾಗಿದೆ. ಕೊಡಗಿನಲ್ಲಿ ವಿಪರೀತ ಮಳೆ ಆದ್ದರಿಂದ ಸಕಲೇಶಪುರ, ಅರಕಲಗೂಡು ಭಾಗದಲ್ಲಿ ₹ 350 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಈವರೆಗೂ ಪರಿಹಾರ ನೀಡಿಲ್ಲ ಎಂದರು.

ಶಾಸಕ ಎ.ಟಿ.ರಾಮಸ್ವಾಮಿ ಬೆಂಬಲಿಗರಿಗೆ ತಲಾ ₹ 5 ಲಕ್ಷ ಮೊತ್ತದ ಕಾಮಗಾರಿ ನೀಡಿ ಸಂತೈಸುವುದರಲ್ಲಿ ತಲ್ಲೀನರಾಗಿದ್ದಾರೆ. 57 ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕು. ಇದರಿಂದ 16 ಸಾವಿರ ಹೆಕ್ಟೇರ್‌ ಬೆಳೆ ಬೆಳೆಯಬಹುದು. ಕೆರೆಗಳನ್ನು ತುಂಬಿಸದಿದ್ದರೆ ರೈತರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ವಿಶ್ವನಾಥ್, ಕೃಷ್ಣನಾಯಕ್, ಹಳ್ಳಿಮೈಸೂರು ಹೋಬಳಿ ಘಟಕದ ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡರಾದ ಮಂಜು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !