ರಾಮನಾಥಪುರ: ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ಆವಕವಾಗುತ್ತಿರುವ ಬೇಲ್ಗಳಿಗೆ ಒಂದೆಡೆ ಮಾರುಕಟ್ಟೆಯಲ್ಲಿ ಜಾಗ ಸಾಕಾಗುತ್ತಿಲ್ಲ. ಇನ್ನೊಂದೆಡೆ ಸರಿಯಾದ ಸಮಯಕ್ಕೆ ಮಾರಾಟವಾಗದೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ವಾರದ ಹಿಂದೆ ಕ್ಲಸ್ಟರ್ ಪದ್ಧತಿ ಇದ್ದಾಗ ಮಾರುಕಟ್ಟೆಗೆ ಹೆಚ್ಚಿನ ಬೇಲ್ಗಳು ಬಾರದ ಕಾರಣ ಮಂಡಳಿಯ ಅಧಿಕಾರಿಗಳು ಕ್ಲಸ್ಟರ್ ವ್ಯವಸ್ಥೆ ಮುಕ್ತ ಗೊಳಿಸಿದರು. ಇದರಿಂದ ಎಲ್ಲ ಕಸ್ಟರ್ನವರು ಸಹ ಬೇಲ್ ತರಬಹುದು ಎಂಬ ಮಾಹಿತಿಯನ್ನೂ ರೈತರಿಗೆ ರವಾನಿಸಿದರು.

ಇದರಿಂದ ಎಚ್ಚೆತ್ತ ರೈತರು ಒಮ್ಮೆಗೆ ಬೇಲ್ ಸಿದ್ಧಪಡಿಸಿಕೊಂಡು ತರಲಾ ರಂಭಿಸಿದರು. ಇದರ ಪರಿಣಾಮ ಕಳೆದೊಂದು ವಾರದಿಂದ ದಿನನಿತ್ಯ 2 ಸಾವಿರಕ್ಕೂ ಅಧಿಕ ಬೇಲ್ಗಳು ಮಾರು ಕಟ್ಟೆಗೆ ಬಂದು ಬೀಳುತ್ತಿವೆ. ಹೀಗಾಗಿ ಆವಕವಾಗುವ ಎಲ್ಲ ಬೇಲ್ಗಳಿಗೆ ಜಗುಲಿ ಮೇಲೆ ಜಾಗ ಸಾಕಾಗದೇ ರೈತರು ಹೈರಾಣಾಗಿದ್ದಾರೆ.
9 ತಿಂಗಳಿನಿಂದ ಕಷ್ಟಪಟ್ಟು ಬೆಳೆದ ತಂಬಾಕು ಕಡೇ ಗಳಿಗೆಯಲ್ಲಿ ನೆಲದ ಮೇಲೆ ಬಿಸಿಲಿನ ತಾಪಕ್ಕೆ ಒಣಗಿ ಗುಣಮಟ್ಟ ಕಳೆದುಕೊಳ್ಳುತ್ತಿದೆ.

ಇದಲ್ಲದೇ ಪ್ಲಾಟ್ಫಾರಂ 63ರಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಹೆಚ್ಚೆಚ್ಚು ಬೇಲ್ಗಳನ್ನು ಒಳ ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಒಂದೂವರೆ ಸಾವಿರ ಬೇಲ್ಗಳು ಮಾರಾಟವಾಗುವ ಬದಲು ದಿನವೊಂದಕ್ಕೆ ಬರಿ 800ರಿಂದ 900 ಬೇಲ್ಗಳನ್ನು ಮಾತ್ರ ಒಳ ಸಾಗಿಸಲಾಗುತ್ತಿದೆ.

ಇವುಗಳಲ್ಲಿ ಕೆಲವು ಬೇಲ್ಗಳು ತಿರಸ್ಕೃತಗೊಳ್ಳುತ್ತಿವೆ. ಹೀಗಾಗಿ ಸಾಲ ಮಾಡಿಕೊಂಡು ವರ್ಷವಿಡೀ ಬೆವರು ಸುರಿಸಿ ತಂಬಾಕು ಬೇಲ್ ಸಿದ್ಧಪಡಿಸಿಕೊಂಡು ತಂದ ರೈತರಿಗೆ ಇಲ್ಲಿ ಕಡೇ ಗಳಿಗೆಯಲ್ಲೂ ಸಹ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೇ ಅಡಕತ್ತರಿಗೆ ಸಿಲುಕಿಸಲಾಗು ತ್ತಿದೆ ಎಂದು ಕೆಲವರು ಆರೋಪಿಸುತ್ತಾರೆ.

ದೂರದ ಶಿವಮೊಗ್ಗ ಹಾಗೂ ಕೆ.ಆರ್. ನಗರ ತಾಲ್ಲೂಕಿನ ಮುಂಡೂರು ಕ್ಲಸ್ಟರ್ನಿಂದ ಬೇಲ್ಗಳನ್ನು ತಂದು ಕಾಯ್ದು ಕುಳಿತು ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿರುವ ರೈತರಿಗೆ ಸರಿಯಾಗಿ ಕುಡಿಯಲು ನೀರು, ಊಟದ ವ್ಯವಸ್ಥೆಯಿಲ್ಲದೇ ನರಳು ವಂತಾಗಿದೆ. ಬಂಡಿಗಳ ಮೇಲೆ ಬೇಲ್ಗಳನ್ನು ಹೇರಿಕೊಂಡು ಬಂದ ಎತ್ತು ಗಳಿಗೆ ಮೇವು- ನೀರು ಸಿಗುತ್ತಿಲ್ಲ. ಮಂಡಳಿ ಅಧಿಕಾರಿಗಳ ಬೇಜವಾ ಬ್ದಾರಿಯಿಂದಾಗಿ ಗೋಳು ಕೇಳುವವರೇ ಇಲ್ಲವಾಗಿದ್ದಾರೆ ಎನ್ನುತ್ತಾರೆ ರೈತರು.

ಈ ಬಾರಿ ತಂಬಾಕು ಮಾರುಕಟ್ಟೆ ಯಲ್ಲಿ ಹರಾಜು ಪ್ರಕ್ರಿಯೆ ಪ್ರಾರಂಭ ವಾದ ದಿನಗಳಿಂದ ಬೇಕಾಬಿಟ್ಟಿ ಬೆಲೆಗೆ ಕೊಳ್ಳುತ್ತಿದ್ದ ಬೇಲ್ಗಳಿಗೆ ಈಗ ಸಾಧಾ ರಣ ಮಟ್ಟಿಗೆ ಬೆಲೆ ಚೇತರಿಕೆ ಕಾಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.