ಅರಸೀಕೆರೆ: ಭ್ರಷ್ಟಾಚಾರ ನಿರ್ಮೂ ಲನೆಗೆ ಎಲ್ಲರೂ ಪಣ ತೊಡಬೇಕು ಎಂದು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಕರೆ ನೀಡಿದರು.

ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಪ್ರಸನ್ನ ಗಣಪತಿ ಭಕ್ತಮಂಡಳಿ ವತಿಯಿಂದ ಈಚೆಗೆ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತೀಯತೆ ಮತ್ತು ಭ್ರಷ್ಟ ರಾಜಕಾರಣಿಗಳಿಂದ ರಾಷ್ಟ್ರದಲ್ಲಿ ಸಂಘರ್ಷ, ಅಶಾಂತಿ ವಾತಾವರಣ ಸೃಷ್ಟಿಯಾಗಿ, ಅಜ್ಞಾನ, ಅನ್ಯಾಯ, ದುಷ್ಕೃತ್ಯಗಳು ಹೆಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಆಧ್ಯಾತ್ಮಿಕ ಚಿಂತನೆಯಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಧ್ಯಾನ, ಸತ್ಸಂಗ, ಭಜನೆ, ಯೋಗದಿಂದ ಬದುಕಿನ ಬವಣೆ ನೀಗಿಸಬಹುದಾಗಿದೆ. ಸಮಾಜದ ಅಭ್ಯದಯಕ್ಕೆ ಧ್ಯಾನ, ಸತ್ಸಂಗ ಪ್ರಸ್ತುತವಾಗಿದ್ದು, ದುರಾಸೆ, ಹಿಂಸೆಗಳನ್ನು ದೂರ ಮಾಡಿ ಧಾರ್ಮಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮುಕ್ತಿ ದೊರೆಯುತ್ತದೆ. ಪ್ರೀತಿ ಹಾಗೂ ಅಹಿಂಸೆ ಮಾರ್ಗದಿಂದ ಜಗತ್ತನ್ನು ಗೆಲ್ಲಲು ಸಾಧ್ಯ. ವಿಚಾರ ಪೂರಿತ ತತ್ವ ಸಿದ್ಧಾಂತಗಳಿಂದ ಪ್ರಪಂಚವನ್ನು ಆಳಲು ಸಾಧ್ಯವೇ ಹೊರತು, ಹಣದಿಂದ ಅಲ್ಲ. ಎಂದು ತಿಳಿಸಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ, ಪುರಸಭಾಧ್ಯಕ್ಷ ಎಂ. ಶಮೀವುಲ್ಲಾ, ಮಾಜಿ ಅಧ್ಯಕ್ಷರಾದ ಎನ್.ಎಸ್. ಸಿದ್ರಾಮಶೆಟ್ಟಿ, ಕೆ.ಎನ್. ದುರ್ಗಪ್ಪಶೆಟ್ಟಿ, ಮಾಜಿ ಶಾಸಕ ಎ.ಎಸ್. ಬಸವರಾಜು, ಪ್ರಸನ್ನ ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಎಸ್.ಎನ್. ಸುಬ್ಬಣ್ಣ, ಉಪಾಧ್ಯಕ್ಷ ಶಾಂತವೀರಯ್ಯ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.