ಹಾಸನ: ಚಿಕ್ಕಮಗಳೂರು ಜಿಲ್ಲೆಯ ಕಡೂರನ್ನೂ ಒಳಗೊಂಡಂಥ ಹಾಸನ ಲೋಕಸಭಾ ಕ್ಷೇತ್ರವನ್ನು ಒಂದು ದಶಕದಿಂದ ಜಾತ್ಯತೀತ ಜನತಾದಳ ತನ್ನ ಭದ್ರ ಕೋಟೆಯಾಗಿಸಿಕೊಂಡಿದೆ. ಇಡೀ ರಾಜ್ಯವೇ ಇತ್ತ ನೋಡುವಂತೆ ಮಾಡಿದೆ.

1991ರ (ಆಗ ಜನತಾ ಪರಿವಾರ) ಚುನಾವಣೆಯಲ್ಲಿ ಕಾಂಗ್ರೆಸ್ನ ಎಚ್.ಸಿ. ಶ್ರೀಕಂಠಯ್ಯ ಅವರನ್ನು ಸೋಲಿಸಿ ಸಂಸತ್ತನ್ನು ಪ್ರವೇಶಿಸಿದ ಎಚ್.ಡಿ. ದೇವೇಗೌಡ ಅವರು ಅಲ್ಲಿಂದ ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಹಿಡಿತವನ್ನು ಬಲಗೊಳಿಸುತ್ತಲೇ ಬಂದಿದ್ದಾರೆ.

ಜೆಡಿಎಸ್ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ ಎಂಬುದು ನಿಜವಾಗಿದ್ದರೂ, ದೇವೇಗೌಡ ಅವರು ಪ್ರಧಾನಿ ಹುದ್ದೆಯಿಂದ ಇಳಿದ ಬಳಿಕವೂ ಇಲ್ಲಿಯ ಜನ ಅವರನ್ನು ಸೋಲಿಸಿದ ಉದಾಹರಣೆಯೂ ಇದೆ. ಕಳೆದ ಚುನಾವಣೆಯಲ್ಲಿ (2009) ಎರಡು ಲಕ್ಷ ಮತಗಳಿಗೂ ಹೆಚ್ಚು ಅಂತರದ ಗೆಲುವನ್ನೂ ಕೊಟ್ಟಿದ್ದಾರೆ.

ಈವರೆಗೆ ನಡೆದ 15 ಚುನಾವಣೆಗಳಲ್ಲಿ ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ರಾಷ್ಟ್ರದಾದ್ಯಂತ ಕಾಂಗ್ರೆಸ್ ಅಲೆ ಇದ್ದಾಗಲೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ. 1957 ಮತ್ತು 1962ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ನ ಸಿದ್ದನಂಜಪ್ಪ ಗೆಲುವು ಸಾಧಿಸಿದ್ದರೆ, 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಶಿವಪ್ಪ ಗೆದ್ದಿದ್ದರು. ಅನಂತರದ ಎರಡು ಚುನಾವಣೆ (1971, 1974) ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ 1977ರಲ್ಲಿ ಭಾರತೀಯ ಲೋಕದಳದ ಟಿಕೆಟ್ನಲ್ಲಿ (ಐಎಲ್ಡಿ) ಎಸ್. ನಂಜೇಶಗೌಡ ಆಯ್ಕೆಯಾಗಿದ್ದರು.

1980 ಮತ್ತು 1984ರಲ್ಲಿ ಕಾಂಗ್ರೆಸ್ನ ಎಚ್.ಎನ್. ನಂಜೇಗೌಡ ಮತ್ತು 1989ರಲ್ಲಿ ಎಚ್.ಸಿ. ಶ್ರೀಕಂಠಯ್ಯ ಆಯ್ಕೆಯಾದರು. ಅಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿಯೇ ಇತ್ತು. 1991ರ ಚುನಾವಣೆಯಲ್ಲಿ ಇಲ್ಲಿ ಹೊಸ ಅಧ್ಯಾಯ ಆರಂಭವಾಯಿತು.

ಮೊದಲ ಬಾರಿಗೆ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಚ್.ಡಿ. ದೇವೇಗೌಡ ಆಯ್ಕೆಯಾದರು. ಆದರೆ ಅವರ ಗೆಲುವಿನ ಅಂತರ ಕೇವಲ 31

91 ಮತಗಳು.

1994ರಲ್ಲಿ ದೇವೇಗೌಡರು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯ ರಾಜಕೀಯಕ್ಕೆ ಮರಳಿ ಮುಖ್ಯಮಂತ್ರಿ ಆದರು. ಮುಂದೆ 96ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ವೈ.ಎನ್. ರುದ್ರೇಶಗೌಡ (ಇವರು ಈಗ ಬೇಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ) ಆಯ್ಕೆಯಾದರು.

ರಾಜಕೀಯ ಸ್ಥಿತ್ಯಂತರದ ಪರಿಣಾಮವಾಗಿ ದೇವೇಗೌಡ 1996ರ ಜೂನ್ 1ರಿಂದ 1997ರ ಏಪ್ರಿಲ್ 21ರವರೆಗೆ ಪ್ರಧಾನಿಯಾಗಿದ್ದರು. 1998 ರ ಚುನಾವಣೆಯಲ್ಲಿ ಮತ್ತೆ ಇಲ್ಲಿ ಜನತಾ ದಳದಿಂದ ಕಣಕ್ಕಿಳಿದು ಗೆದ್ದರು.

1999ರ ಚುನಾವಣೆಯಲ್ಲಿ ಹಾಸನದ ರಾಜಕೀಯ ಚಿತ್ರಣ ಬದಲಾಯಿತು. ಜಾತ್ಯತೀತ ಜನತಾ ದಳದ ಪ್ರಶ್ನಾತೀತ ನಾಯಕ ದೇವೇಗೌಡರನ್ನು ಇಲ್ಲಿ ಕಾಂಗ್ರೆಸ್ನ ಜಿ. ಪುಟ್ಟಸ್ವಾಮಿ ಗೌಡ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದರು.

ಆದರೆ, 2004 ಮತ್ತು 2009ರಲ್ಲಿ ಕ್ರಮವಾಗಿ ಕಾಂಗ್ರೆಸ್ನ ಶ್ರೀಕಂಠಯ್ಯ ಹಾಗೂ ಬಿಜೆಪಿಯ ಕೆ.ಎಚ್. ಹನುಮೇಗೌಡ ಅವರನ್ನು ಸೋಲಿಸಿದ ದೇವೇಗೌಡ ಅವರು ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಕಾಂಗ್ರೆಸ್ನ ಸಿದ್ದನಂಜಪ್ಪ (1957, 1962) ಹಾಗೂ ಎಚ್.ಎನ್. ನಂಜೇಗೌಡ (1980, 1984) ಅವರು ಈ ಕ್ಷೇತ್ರದಿಂದ ಎರಡೆರಡು ಬಾರಿ ಆಯ್ಕೆಯಾಗಿದ್ದರು. ಈ ಸಾಧನೆಯನ್ನು ಮುರಿದ ಶ್ರೇಯಸ್ಸು ದೇವೇಗೌಡ ಅವರಿಗೆ ಸಲ್ಲುತ್ತದೆ. 1991ರಲ್ಲಿ ಮೊದಲ ಬಾರಿ ಈ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ ದೇವೇಗೌಡನಂತರ ಮೂರು ಚುನಾವಣೆಗಳಲ್ಲಿ ಆಯ್ಕೆಯಾಗಿದ್ದಾರೆ.

ಬಲಿಷ್ಠ ಹಿಡಿತ: 1991ರ ಬಳಿಕ ಹಾಸನದಲ್ಲಿ ಜನತಾ ಪರಿವಾರ ಗಟ್ಟಿಗೊಳ್ಳುತ್ತಾ ಹೋಯಿತು ಎಂಬುದು ಒಂದೆಡೆಯಾದರೆ, ಶ್ರೀಕಂಠಯ್ಯ ಬಳಿಕ ಕಾಂಗ್ರೆಸ್ನಲ್ಲಿ ಅಂಥ ನಾಯಕರೂ ಸೃಷ್ಟಿಯಾಗಿಲ್ಲ ಎಂಬುದೂ ಅಷ್ಟೇ ನಿಜ. ವಿಧಾನಸಭಾ ಕ್ಷೇತ್ರ ವಿಂಗಡಣೆಯ ಬಳಿಕ ಮಾಜಿ ಸಚಿವ ಬಿ. ಶಿವರಾಂ ಅವರಿಗೂ ಗೆಲುವಿನ ರುಚಿ ಸಿಕ್ಕಿಲ್ಲ. ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ನಲ್ಲಿದ್ದ ಕೆಲವು ಮುಖಂಡರು ಕ್ರಮೇಣ ಜೆಡಿಎಸ್ ತೆಕ್ಕೆಗೆ ಜಾರಿಕೊಂಡರು. ಹೀಗಾಗಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಜೆಡಿಎಸ್ ಶಾಸಕರೇ ಗೆದ್ದರು. ಕಾಂಗ್ರೆಸ್ ಪಕ್ಷ ಅರಕಲಗೂಡು ಹಾಗೂ ಬೇಲೂರು ಕ್ಷೇತ್ರಗಳಿಗೆ ಸೀಮಿತವಾಯಿತು.

ಹಂತ ಹಂತವಾಗಿ ಎಲ್ಲ ಸ್ಥಳೀಯ ಸಂಸ್ಥೆಗಳೂ ಜೆಡಿಎಸ್ ತೆಕ್ಕೆಗೆ ಬಂದವು. ಅಲ್ಲಿಯೂ ಕೆಳ ಹಂತದ ನಾಯಕರು ಜೆಡಿಎಸ್ ಕಡೆ ಜಾರಿಕೊಂಡರು. ‘ಕಾಂಗ್ರೆಸ್ನೊಂದಿಗೆ ಹಿಂದಿನಿಂದಲೇ ಗುರುತಿಸಿಕೊಂಡವರು ಈಗ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಉಳಿದವರು ಮತದಾರರು. ನಮ್ಮಲ್ಲಿ ಕಾರ್ಯಕರ್ತರೇ ಇಲ್ಲ’ ಎಂದು ಈಗ ಕಾಂಗ್ರೆಸ್ನ ನಾಯಕರೇ ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.