ಶುಕ್ರವಾರ, ನವೆಂಬರ್ 27, 2020
22 °C

ವ್ಯಕ್ತಿಯನ್ನು ಕಟ್ಟಿಹಾಕಿ 20 ಕುರಿಗಳ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರೇಕೆರೂರ: ರಟ್ಟೀಹಳ್ಳಿ ತಾಲ್ಲೂಕಿನ ಹಳ್ಳೂರು ಗ್ರಾಮದ ಹೊರವಲಯದಲ್ಲಿರುವ ಕುರಿಗಳ ಶೆಡ್‌ ನಲ್ಲಿ ಮಲಗಿದ್ದ ವ್ಯಕ್ತಿಯನ್ನು ಬುಧವಾರ ಮಧ್ಯರಾತ್ರಿ ಕಟ್ಟಿಹಾಕಿ 20 ಕುರಿಗಳನ್ನು ಕಳ್ಳತನ ಮಾಡಲಾಗಿದೆ. 

ಬಸನಗೌಡ ಪುರದಕೇರಿ ಎಂಬುವವರಿಗೆ ಸೇರಿದ ಕುರಿಗಳು ಹಾಗೂ ಅವರ ಮೊಬೈಲ್‌ ಕಳ್ಳತನವಾಗಿದೆ. ಮಧ್ಯರಾತ್ರಿ ಸುಮಾರು ಏಳೆಂಟು ಜನ ಮುಸುಕುಧಾರಿಗಳು ಶೆಡ್‌ಗೆ ನುಗ್ಗಿ ಅಲ್ಲಿ ಮಲಗಿದ್ದ ಮಾಲೀಕ ಬಸನಗೌಡ ಪುರದಕೇರಿ ಅವರನ್ನು ಕಟ್ಟಿಹಾಕಿ, ಶೆಡ್‌ ನಲ್ಲಿದ್ದ ಎಲ್ಲ 20 ಕುರಿಗಳು ಹಾಗೂ ಮೊಬೈಲ್‌ ಕಳ್ಳತನ ಮಾಡಿ, ಬೈಕ್‌ ಅನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ.

ಪೊಲೀಸ್‌ ವಾಹನ ಅಪಘಾತ: ಘಟನೆಯ ವಿಷಯ ತಿಳಿದು ಮಧ್ಯರಾತ್ರಿ ಸ್ಥಳಕ್ಕೆ ಆಗಮಿಸುತ್ತಿದ್ದ ರಟ್ಟೀಹಳ್ಳಿ ಪೊಲೀಸ್‌ ಠಾಣೆಯ ರಾತ್ರಿ ಗಸ್ತು ವಾಹನ 112 ಹಳ್ಳೂರು ಗ್ರಾಮದ ಸಮೀಪ ಅಪಘಾತಕ್ಕೀಡಾಗಿದೆ. ವಾಹನ ಚಾಲಕ ಪ್ರವೀಣ ಎಂಬುವವರು ತಲೆಗೆ ಪೆಟ್ಟುಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಬ್ಬ ಹೆಡ್‌ ಕಾನ್‌ಸ್ಟೆಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ರಟ್ಟೀಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.