ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂಸಿ ಪ್ರಾಂಗಣದಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ

Last Updated 1 ಜೂನ್ 2019, 14:47 IST
ಅಕ್ಷರ ಗಾತ್ರ

ಹಾನಗಲ್:ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಾಮಾನ್ಯ ಸಭೆಯು ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಮಾರುಕಟ್ಟೆ ಅಭಿವೃದ್ಧಿಗೊಳಿಸುವ ಹಲವು ನಿರ್ಣಯಗಳು ಸಭೆಯಲ್ಲಿ ಒಮ್ಮತದಿಂದ ಅನುಮೋದನೆಗೊಂಡವು.

ಹಾನಗಲ್ ಎಪಿಎಂಸಿ ಮುಖ್ಯ ಪ್ರಾಂಗಣದಲ್ಲಿ ರೂ. 80 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಆಡಳಿತ ಮಂಡಳಿ ಅನುಮೋದನೆ ದೊರಕಿತು. ಅಕ್ಕಿಆಲೂರ ಜಾನುವಾರು ಮಾರಾಟದ ಮಾರುಕಟ್ಟೆಯ ಜಾಗೆಯಲ್ಲಿ ಕುರಿ, ಮೇಕೆ ಮಾರುಕಟ್ಟೆ ನಿರ್ಮಾಣಕ್ಕೆ ಆಸಕ್ತಿ ವಹಿಸಿರುವ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಅವಕಾಶ ಮಾಡಿಕೊಡುವ ಕುರಿತು ನಿರ್ಣಯಿಸಲಾಯಿತು. ತಾಲ್ಲೂಕಿನ ತಿಳವಳ್ಳಿ ಗ್ರಾಮದಲ್ಲಿ ರೂ. 75 ಲಕ್ಷ ವೆಚ್ಚದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಶೇಖಣ್ಣ ಮಹರಾಜಪೇಟ, ಉಪಾಧ್ಯಕ್ಷೆ ಸುಜಾತಾ ಪಸಾರದ, ಸದಸ್ಯರಾದ ಗೀತಾ ಕೋರಿ, ದಯಾನಂದ ನಾಗನೂರ, ಗುರುರಾಜ ನಿಂಗೋಜಿ, ನಾಗಪ್ಪ ಶಿವಣ್ಣನವರ, ರಾಮಪ್ಪಮಾದಪ್ಪನವರ, ಕೂಬೆಪ್ಪ ಲಮಾಣಿ, ಶಿವಯೋಗಿ ವಡೆಯರ, ಸಿದ್ಧಪ್ಪ ಬಂಗಾರೇರ, ರಾಜಣ್ಣ ಪಟ್ಟಣದ, ಹನುಮಂತಪ್ಪ ಗಂಜಿಗಟ್ಟಿ, ಕಾರ್ಯದರ್ಶಿ ಬಸವರಾಜ ಪರಮಶೆಟ್ಟಿ, ಸಿಬ್ಬಂದಿ ಜಾವೇದ್ಅಲಿ ಎ,ಫಕ್ಕೀರೇಶ ದೊಡ್ಡಮನಿ ಇದ್ದರು.ಸಭೆಯ ಬಳಿಕ ಎಪಿಎಂಸಿ ಹಾನಗಲ್ ಮುಖ್ಯ ಕಚೇರಿಯಲ್ಲಿ ಸಿಪಾಯಿ ಲಲಿತಾ ಹಾವೇರಿ ನಿವೃತ್ತರಾದ ನಿಮಿತ್ತವಾಗಿ ಅವರನ್ನು ಸಮಿತಿಯ ಸದಸ್ಯರು ಮತ್ತು ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT