ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ | ₹8.49 ಲಕ್ಷ ಮೌಲ್ಯದ ಆಭರಣ ಕಳವು

Published : 22 ಸೆಪ್ಟೆಂಬರ್ 2024, 15:33 IST
Last Updated : 22 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ಬ್ಯಾಡಗಿ: ಪಟ್ಟಣದ ಸೋಮೇಶ್ವರ ನಗರದ ಮನೆಯೊಂದರಲ್ಲಿ ₹8.49 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ, ಬೀಗ ಮುರಿದು ಒಳನುಗ್ಗಿದ ಕಳ್ಳರು ತಿಜೋರಿಯಲ್ಲಿದ್ದ 154 ಗ್ರಾಂ ಚಿನ್ನಾಭರಣ ಹಾಗೂ 24 ಗ್ರಾಂ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾದ್ದಾರೆ ಎಂದು ಶಿವಯೋಗೆಪ್ಪ ಮುರುಗೆಪ್ಪ ಚಿನವಾಲ ದೂರು ನೀಡಿದ್ದಾರೆ.

ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿ: ಇಬ್ಬರಿಗೆ ಗಾಯ

ಬ್ಯಾಡಗಿ: ತಾಲ್ಲೂಕಿನ ಕದಮನಹಳ್ಳಿ ಕ್ರಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೈಕ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕಲ್ಲೆದೇವರು ಗ್ರಾಮದ ಉಮೇಶ ಪುಟ್ಟಪ್ಪ ಚೂರಿ ಹಾಗೂ ವೀರೇಶ ಉಮಾಪತಿ ದಾನಯ್ಯನಮಠ ಗಾಯಗೊಂಡವರು. ಅವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಚಾಲಕ, ಹುಬ್ಬಳ್ಳಿಯ ಗಾಮನಗಟ್ಟಿ ನಿವಾಸಿ ಎಸ್‌. ಶ್ರೀನಿವಾಸ ವಿರುದ್ಧ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT