ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಅಪರೂಪದ ಸ್ಫಟಿಕ ಲಿಂಗ ಕಳ್ಳತನ

ಲಿಂಗದಹಳ್ಳಿಯ ಹಿರೇಮಠದ 3 ಬೆಳ್ಳಿಗಟ್ಟಿ ದೋಚಿದ ಕಳ್ಳರು
Last Updated 7 ಜೂನ್ 2022, 13:05 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಖಾ ಹಿರೇಮಠದ ರೇಣುಕಾಚಾರ್ಯರ ಗರ್ಭಗುಡಿ ಬೀಗವನ್ನು ಮುರಿದು 8ನೇ ಶತಮಾನದ ಅಪರೂಪದ ಸ್ಫಟಿಕಲಿಂಗವನ್ನು ಮಂಗಳವಾರ ಬೆಳಗಿನ ಜಾವ ಕಳ್ಳತನ ಮಾಡಲಾಗಿದೆ.

ಈ ಸ್ಫಟಿಕ ಲಿಂಗವು13 ಇಂಚು ಸುತ್ತಳತೆಯಿಂದ ಕೂಡಿತ್ತು. ಈ ಲಿಂಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮಠದವರು ತಿಳಿಸಿದ್ದಾರೆ.ಸ್ವಾಮೀಜಿ ವಾಸದ ಕೋಣೆಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ಟ್ರಜರಿಯಲ್ಲಿದ್ದ 500 ಗ್ರಾಂ ತೂಕದ ₹25 ಸಾವಿರ ಮೌಲ್ಯದ 3 ಬೆಳ್ಳಿ ಗಟ್ಟಿಗಳನ್ನೂ ದೋಚಿದ್ದಾರೆ.ಸ್ವಾಮೀಜಿ ಮಠದಲ್ಲಿ ಇಲ್ಲದಿರುವ ವೇಳೆ ಈ ಕೃತ್ಯ ನಡೆದಿದೆ.

ಮಠದ ಪೀಠಾಧಿಪತಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನಾನು ನಿನ್ನೆ ಕೊಟ್ಟೂರಿಗೆ ಹೋಗಿದ್ದೆ. ರೇಣುಕರ ಮೂರ್ತಿ ಮತ್ತು ಸ್ಫಟಿಕ ಲಿಂಗವನ್ನು ನಿತ್ಯ ಪೂಜೆ ಮಾಡುತ್ತಿದ್ದೆ. ದಕ್ಷಿಣ ಭಾರತದಲ್ಲಿಯೇ ಬೃಹತ್ ಸ್ಫಟಿಕ ಲಿಂಗ ಇದಾಗಿತ್ತು. ಮಠದ ಆವರಣದಲ್ಲಿನ ಸಿಸಿಟಿವಿ ಕ್ಯಾಮೆರಾ ಬಂದ್‌ ಮಾಡಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಮಠಕ್ಕೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂತು’ ಎಂದು ತಿಳಿಸಿದ್ದಾರೆ.

ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT