ಮಂಗಳವಾರ, ಸೆಪ್ಟೆಂಬರ್ 21, 2021
28 °C

ಬೈಕ್‌ ಕಳವು: ಆರೋಪಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಾರಪಟ್ಟಣ: ಮೂರು ತಿಂಗಳ ಹಿಂದೆ ಮೂರು ಬೈಕ್‌ ಕಳವು ಮಾಡಿದ್ದ  ಆರೋಪಿ ಮುಜೀಬ್ ಅಬ್ಬುಸಾಲಿಯಾ ಹರೇಜೆಲ್ಲಿ (23) ಎಂಬಾತನನ್ನು ಬೈಕ್‌ ಸಮೇತ ಕುಮಾರಪಟ್ಟಣ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಆರೋಪಿ ಮುಜೀಬ್‌ ಸಮೀಪದ ಕವಲೆತ್ತು ಗ್ರಾಮದಲ್ಲಿ ಮನೆ ಬಾಡಿಗೆ ಪಡೆದು ವಾಸ ಮಾಡುತ್ತಿದ್ದ. ಕವಲೆತ್ತು ಗ್ರಾಮದಲ್ಲಿ 1, ಹರಿಹರ ನಗರ ವ್ಯಾಪ್ತಿಯಲ್ಲಿ 2 ಬೈಕ್‌ ಕಳವು ಆಗಿತ್ತು. ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ತೀವ್ರ ಶೋಧದ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕುಮಾರಪಟ್ಟಣ ಠಾಣೆ ಪಿಎಸ್‌ಐ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಿಳಾ ಪಿಎಸ್‌ಐ ಅಸಾಧಿ, ಎಎಸ್‌ಐ ಸಿ.ಡಿ.ನಡುವಿನಮನಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.