ಮಂಗಳವಾರ, ನವೆಂಬರ್ 29, 2022
29 °C
ಮೋದಿ ವ್ಯಕ್ತಿಯಲ್ಲ, ಅಗಾಧ ಶಕ್ತಿ: ಬಣ್ಣದಮಠದ ಸ್ವಾಮೀಜಿ ಅಭಿಮತ

ಹಾವೇರಿ: ಮೋದಿ@20 ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮೋದಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರೊಂದು ಅಗಾಧ ಶಕ್ತಿ. ಶಕ್ತಿಯಿಂದ ಮಾತ್ರ ಗುಣಾತ್ಮಕ ಅಭಿವೃದ್ಧಿ ಸಾಧ್ಯ. ಮೋದಿಯವರು ದೇಶವನ್ನು ಸರ್ವರೀತಿಯಲ್ಲೂ ಸದೃಢವನ್ನಾಗಿ ಅಭಿವೃದ್ಧಿಪಡಿಸುತ್ತಿರುವುದು ಹೆಮ್ಮಯ ವಿಷಯ’ ಎಂದು ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಅಭಿಪ್ರಾಯಪಟ್ಟರು. 

ನಗರದ ಅಶೋಕ ಹೋಟಲ್‍ನಲ್ಲಿ ಅಭಿವ್ಯಕ್ತಿ ಹಾವೇರಿ ತಂಡದ ವತಿಯಿಂದ ‘ಮೋದಿ@20 ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದರು. 

ಉಪನ್ಯಾಸಕ ಪ್ರಮೋದ ನಲವಾಗಲ, ಮೋದಿಯವರು 13 ವರ್ಷಗಳ ಕಾಲ ಗುಜರಾತ್‌ ರಾಜ್ಯದ ಮುಖ್ಯಮಂತ್ರಿಗಳಾಗಿ ಹಾಗೂ 7 ವರ್ಷ ಭಾರತದ ಪ್ರಧಾನ ಮಂತ್ರಿಯಾಗಿ ಸಲ್ಲಿಸಿರುವ ಸೇವೆ ಕುರಿತು ಮಾತನಾಡಿದರು.

ರಾಷ್ಟ್ರದ ಜವಾಬ್ದಾರಿಯುತ ಪ್ರಜೆಗಳಾದ ನಾವು ರಾಷ್ಟ್ರದ ಏಕತೆ ಹಾಗೂ ಅಭಿವೃದ್ದಿಯ ಬಗ್ಗೆ ಯಾವುದೇ ವ್ಯಕ್ತಿ ಮಾತನಾಡಿದಾಗ ನಾವು ಅವರನ್ನು ಗೌರವಿಸಬೇಕು. ಆದರೆ ಇಂದು ಸಮಾಜದ ಬಹುಪಾಲು ಜನರು ವ್ಯಕ್ತಿಯನ್ನು ಪಕ್ಷದ ಹಿನ್ನೆಲೆಯಿಂದ ಗುರುತಿಸಿ, ಟೀಕಿಸುವುದರ ಜೊತೆಗೆ ದೇಶವನ್ನು ಜರಿಯುತ್ತಿರುವುದು  ವಿಷಾದನೀಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಬಣಕಾರ ಮಾತನಾಡಿ, ‘ಈ ಪುಸ್ತಕ 21 ಗಣ್ಯ ವ್ಯಕ್ತಿಗಳು ಮೋದಿಜಿಯವರ ಕುರಿತು ಬರೆದಿರುವ ಅಂಕಣಗಳನ್ನು ಒಳಗೊಂಡಿದೆ. ಇಂದಿಗೆ ದೇಶಕ್ಕೆ ಸ್ವತಂತ್ರ್ಯ ದೊರಕಿ 75 ವರ್ಷಗಳು ದೊರಕಿದರೂ ಜನರ ಮೂಲ ಸಮಸ್ಯೆಗಳ ಕುರಿತು ಇಂದು ಗಂಭೀರ ಚಿಂತನೆ ನಡೆದಿದೆ. ಮೋದಿಜಿಯವರು ದೇಶದ ಚುಕ್ಕಾಣಿ ಹಿಡಿದ ನಂತರ ಭಾರತದ ಸ್ಥಾನಮಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದಿದೆ’ ಎಂದರು. 

ಡಾ.ಸಂತೋಷ ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಕುಲಕರ್ಣಿ ಸ್ವಾಗತಿಸಿದರು, ಕಿರಣ ಕೋಣನವರ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಉದ್ಯಮಿಗಳಾದ ಪವನಬಹುದ್ದೂರ ದೇಸಾಯಿ, ವೈದ್ಯರಾದ ಡಾ.ಶಿವಾನಂದ ಕೆಂಬಾವಿ, ವಕೀಲರಾದ ಎಸ್.ಆರ್. ಹೆಗಡೆ, ಮಾಜಿ ಸಿ.ಬಿ.ಐ ಅಧಿಕಾರಿಗಳಾದ ಗೋಪಾಲ ಸವಣೂರ, ವಕೀರ ಸಂಘದ ಪದಾಧಿಕಾರಿಗಳು, ಉದ್ಯಮಿಗಳು, ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು