ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾಂವಿ | ಶಾಲೆಗೆ ಬಸ್‌ ವ್ಯವಸ್ಥೆ: ವಿದ್ಯಾರ್ಥಿಗಳಲ್ಲಿ ಸಂತಸ

Published 24 ಜೂನ್ 2024, 14:33 IST
Last Updated 24 ಜೂನ್ 2024, 14:33 IST
ಅಕ್ಷರ ಗಾತ್ರ

ತಡಸ(ಕುನ್ನೂರ): ಶಿಗ್ಗಾಂವ ತಾಲೂಕಿನ ಕುನ್ನೂರ ಗ್ರಾಮದ ಮೌಲಾನಾ ಆಜಾದ್ ಮಾದರಿ (ಇಂಗ್ಲಿಷ ಮಾದ್ಯಮ) ಶಾಲೆಗೆ 6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸಂಚರಿಸುವುದಕ್ಕೆ ಸೋಮವಾರ ಬಸ್‌ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಶಪ್ಪ ಹರಿಜನ ದೊಡ್ಡಮನಿ ಮಾತನಾಡಿ, ಸರ್ಕಾರಿ ಪ್ರೌಢಶಾಲೆ ಕುನ್ನೂರ ಆವರಣದಲ್ಲಿದ್ದು, ನೂತನ ಕಟ್ಟಡವಾದ ಕುನ್ನೂರ ಪ್ಲಾಟ್ ಮಮದಾಪೂರ ರೋಡ್ ಕುನ್ನೂರ ಶಾಲೆಯಲ್ಲಿ 300ರಿಂದ 350ಕ್ಕೂ ಹೆಚ್ಚು ಮಕ್ಕಳು ಸುತ್ತಮುತ್ತ ಹಳ್ಳಿಗಳಿಂದ ಬರುತ್ತಾರೆ. ಈ ಬಸ್‌ ವ್ಯವಸ್ಥೆಯಿಂದಾಗಿ ತಡಸ, ಹೊಸೂರ, ದುಂಡಸಿ, ಅಡವಿಸೋಮಾಪೂರ ಮತ್ತು ತೋರುರ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.

ಮೆಹಬೂಬ್ ಅಗಡಿ ಮಾತನಾಡಿ, ಮಳೆಗಾಲದಲ್ಲಿ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು ಮಕ್ಕಳ ಹಿತದೃಷ್ಟಿಯಿಂದ ಈ ಮಾರ್ಗವಾಗಿ ಶಿಗ್ಗಾಂವ ಕುನ್ನುರ ಮಮದಾಪೂರ ಕುನ್ನೂರ ತಡಸ, ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭವಾಗಿದ್ದು ತಾಲೂಕಿನ ಗಡಿ ಗ್ರಾಮಕ್ಕೆ ಅನುಕೂಲವಾಗಿದೆ ಎಂದರು.

ಬಸ್ ಗ್ರಾಮಸ್ಥರು  ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಸನ್ಮಾನಿಸಿ ಗೌರವಿಸಿದರು. ಬಸ್‌ ಶೃಂಗರಿಸಿ ತೋರಣ ಕಟ್ಟಿದರು.

ಗ್ರಾಮದ ಅಬ್ದುಲ್ ರಜಾಕ್ ಬಡಿಗೇರ, ಸುಭಾಷ ಜಾದವ್, ಪಂಚಾಕ್ಷರಿ ಹಿರೇಮಠ, ಬಸವರಾಜ ಅಕ್ಕಿ, ತಿಪ್ಪಣ್ಣ ಸುಣಗಾರ, ಸೋಮಯ್ಯ ಹಿರೇಮಠ, ಬ್ರಹ್ಮಾನಂದ ಕಮ್ಮಾರ್, ರಮೇಶ ಅಕ್ಕಿ ಹಾಗೂ ಶಾಲಾ ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT