ಗುರುವಾರ , ಅಕ್ಟೋಬರ್ 22, 2020
23 °C

ಹಾಥರಸ್ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ಶಿಗ್ಗಾವಿ ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.

ಕಾರ್ಯಕರ್ತರು ದೀಪ ಹಿಡಿದುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು,ಯುವತಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಘೋಷಣೆ ಕೂಗಿದರು.

ತಾಲ್ಲೂಕು ಕಾಂಗ್ರೆಸ್ ಮುಖಂಡ ಶ್ರೀಕಾಂತ ದುಂಡಿಗೌಡ್ರ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ವೆಂಕೋಜಿ, ಕಾರ್ಯಾಧ್ಯಕ್ಷ ವೀರೇಶ ಆಜೂರ, ಹನುಮರೆಡ್ಡಿ ನಡುವಿನಮನಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಗುಡ್ಡಪ್ಪ ಜಲದಿ, ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀಕಾಂತ ಪೂಜಾರ, ಮಜೀದ ಮಾಳಗಿಮನಿ, ಕೇದಾರಪ್ಪಾ ಬಗಾಡೆ, ಪುರಸಭೆ ಸದಸ್ಯೆ ವಸಂತಾ ಬಾಗೂರು, ಸುಲೇಮಾನ್ ತರ್ಲಗಟ್ಟ, ಮುಸ್ತಾಕ ಮುಲ್ಲಾ, ಶಬ್ಬೀರ ಮಕಾಂದರ, ಮಂಜುನಾಥ್ ಮಣ್ಣಣ್ಣವರ, ಗೌಸುಖಾನ್ ಮುನಸಿ, ಅಶೋಕ್ ಗಾಣಗೇರ, ಮಾಲತೇಶ ಸಾಲಿ, ಬಸನಗೌಡ ಪಾಟೀಲ, ಆರ್.ಜಿ.ಪಾಟೀಲ, ಸುಮೀತ ಸೂರ್ಯವಂಶಿ, ನವೀನ್ ಸಾಸನೂರ, ಗುರು ಅಣ್ಣಿಗೇರಿ, ಶಂಭು ನೆರ್ತಿ, ವಿಶ್ವನಾಥ ಗಾಣಗೇರ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.