4
ಸವಣೂರ ತಾಲ್ಲೂಕಿನ ಹತ್ತಿಮತ್ತೂರದಲ್ಲಿ ಹಾಡಹಗಲೇ ಭೀಕರ ಕೃತ್ಯ

ದಂಪತಿ ಕೊಲೆ

Published:
Updated:
ಕೊಲೆ ಆರೋಪಿ ಕೋಟೆಪ್ಪ ಅಂಬಿಗೇರ

ಸವಣೂರ(ಹಾವೇರಿ ಜಿಲ್ಲೆ): ತಾಲ್ಲೂಕಿನ ಹತ್ತಿಮತ್ತೂರ ಗ್ರಾಮದ ಮಾರ್ತಂಡಪ್ಪ ಬಾರ್ಕಿ (38) ಮತ್ತು ಸುಧಾ ಬಾರ್ಕಿ (29) ದಂಪತಿಯನ್ನು ಶನಿವಾರ ಬೆಳಿಗ್ಗೆ ಮನೆಯಲ್ಲಿಯೇ ಮಚ್ಚಿನಿಂದ ಕಡಿದು ಕೊಲೆ ಮಾಡಲಾಗಿದ್ದು, ಆರೋಪಿ ಇದೇ ಗ್ರಾಮದ ಕೋಟೆಪ್ಪ ಅಂಬಿಗೇರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬುರ್ಕಾ ಹಾಗೂ ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ಆರೋಪಿಯು, ಮಾರ್ತಂಡಪ್ಪ ಬಾರ್ಕಿ ಅವರನ್ನು ಮನೆಯ ಮುಂದಿನ ಬಾಗಿಲಿನ ಬಳಿಯೇ ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದಾನೆ. ತಡೆಯಲು ಬಂದ ಅವರ ಪತ್ನಿ ಮೇಲೆಯೂ ಹಲ್ಲೆ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆ ಮಾಡಿದ ಬಳಿಕ ಆರೋಪಿಯು ತೆರಳುತ್ತಿದ್ದ ಕಾರು, ಊರ ಹೊರವಲಯದಲ್ಲಿ ಉರುಳಿ ಬಿದ್ದಿದೆ. ಅಲ್ಲಿಗೆ ಬಂದ ಪೊಲೀಸರಿಗೆ ಆತನು ಶರಣಾಗಿದ್ದಾನೆ.

‘ನನ್ನ ಪತ್ನಿಯ ಜೊತೆ ಮಾರ್ತಂಡಪ್ಪ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ಎಸಗಿದ್ದನು. ಅದಕ್ಕಾಗಿ, ಹಲವು ದಿನಗಳಿಂದ ಹೊಂಚು ಹಾಕಿ ಕೊಲೆ ಮಾಡಿದ್ದೇನೆ. ಪೊಲೀಸ್ ಠಾಣೆಗೆ ಹೋಗುತ್ತಿದ್ದ ವೇಳೆಯಲ್ಲಿ ಕಾರು ಉರುಳಿಬಿದ್ದಿದೆ’ ಎಂದು ಆರೋಪಿಯು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

‘ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ. ಆದರೆ, ದ್ವೇಷದ ಸ್ಪಷ್ಟ ಕಾರಣವನ್ನು ಆರೋಪಿಯು ನೀಡುತ್ತಿಲ್ಲ. ಅಲ್ಲದೇ, ಒಬ್ಬನೇ ಕೊಲೆ ಮಾಡಿದ್ದಾನೆಯೇ? ಅಥವಾ ಹಿಂದೆ ಬೇರೆ ವ್ಯಕ್ತಿಗಳ ಕೈವಾಡ ಇದೆಯೇ? ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ‘ಪ್ರಜಾವಾಣಿ’ಗೆ ತಿಳಿಸಿದರು. ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !