ಮಂಗಳವಾರ, ಜೂನ್ 22, 2021
29 °C
ಇಒ ಸೇರಿ 132 ಮಂದಿಗೆ ಸೋಂಕು‌: 42 ಮಂದಿ ಗುಣಮುಖ, ವ್ಯಕ್ತಿ ಸಾವು

2 ಸಾವಿರದ ಗಡಿ ದಾಟಿದ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ವಕೀಲ, ಶುಶ್ರೂಷಕಿ, ಪೊಲೀಸ್ ಸಿಬ್ಬಂದಿ, ಕೆ.ಎಸ್.ಆರ್.ಟಿ.ಸಿ. ವಾಹನ ಚಾಲಕ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ 132 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 42 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2057 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1279 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಬುಧವಾರದ ಒಂದು ಸಾವು ಸೇರಿ ಒಟ್ಟಾರೆ 43 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 735 ಸಕ್ರಿಯ ಪ್ರಕರಣಗಳಿವೆ.

ಬುಧವಾರ ದೃಢಗೊಂಡ ಪ್ರಕರಣಗಳಲ್ಲಿ ಸವಣೂರು-1, ಶಿಗ್ಗಾವಿ–8, ಹಾನಗಲ್-13, ಹಿರೇಕೆರೂರು-19, ಬ್ಯಾಡಗಿ-23, ರಾಣೆಬೆನ್ನೂರು-30 ಹಾಗೂ ಹಾವೇರಿ ತಾಲೂಕಿನಲ್ಲಿ 38 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ವಿವರ:

ಬ್ಯಾಡಗಿ ಪಟ್ಟಣ-12, ಚಿನ್ನಿಕಟ್ಟಿ-2, ಮಾಸಣಗಿ-3 ಅಗಸನಹಳ್ಳಿ, ಬನ್ನಿಹಟ್ಟಿ, ಕೋಡಿಹಳ್ಳಿ, ಅಂಗಾರಗಟ್ಟಿ, ನಾಗಲಾಪುರ ಹಾಗೂ ಮೋಟೆಬೆನ್ನೂರ ಗ್ರಾಮದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ.

ಹಾನಗಲ್ ಪಟ್ಟಣ-6, ಬೆಳಗಾಲಪೇಟೆ-2 ಯಳ್ಳೂರು, ಹಾವಣಗಿ, ಗುಡ್ಡದಮತ್ತಿಹಳ್ಳಿ, ನೆಲ್ಲಿಬೀಡ, ಅರಿಶಿನಗುಪ್ಪಿಯಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ. ಹಾವೇರಿ ಪಟ್ಟಣ-28, ಗುತ್ತಲ-4, ಕೋಳೂರ-2, ಕಬ್ಬೂರ, ನಾಗನೂರ, ಕರ್ಜಗಿ, ದೇವಿಹೊಸೂರು ತಲಾ ಒಂದು ಪ್ರಕರಣ ದೃಢಪಟ್ಟಿವೆ.

ರಾಣೇಬೆನ್ನೂರು-25, ಕುಮಾರಪಟ್ಟಣ, ಬೆನಕನಕೊಂಡ, ಕುರಬಗೇರಿ, ಸರವಂದ, ತ್ಯಾವರಗಿ ತಲಾ ಒಂದು ಪ್ರಕರಣ ದೃಢಪಟ್ಟಿವೆ. ಹಿರೇಕೆರೂರು ತಾಲ್ಲೂಕು ಹಿರೇಮೊರಬ-6, ಹಂಸಭಾವಿ-3, ಚಿನ್ನಮುಳಗುಂದ-2, ಶಿರಗುಂಬಿ-2, ರಟ್ಟೀಹಳ್ಳಿ-2, ನೇಶ್ವಿ, ಹಿರೇಬುದ್ನಾಳ, ಹುಲ್ಲತ್ತಿ, ಮಾಸೂರನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಶಿಗ್ಗಾವಿ-3, ಕಬನೂರ, ದುಂಢಶಿ, ಹಲಗೂರ, ಗಂಗೀಭಾವಿ, ಕಾಡಳ್ಳಿಯಲ್ಲಿ ತಲಾ ಒಂದು ಪ್ರಕರಣ ಹಾಗೂ ಸವಣೂರ ತಾಲ್ಲೂಕಿನ ಹೊಸನೀರಲಗಿ ಗ್ರಾಮದ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮರಣದ ವಿವರ:

ರಾಣೆಬೆನ್ನೂರಿನ ಅಶೋಕನಗರದ 61 ವರ್ಷದ ಪುರುಷ (ಪಿ-202230) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 8ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಆಗಸ್ಟ್ 10ರಂದು ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ಬಿಡುಗಡೆ:

ಬುಧವಾರ ಸವಣೂರು -17, ಶಿಗ್ಗಾವಿ-4, ಹಾವೇರಿ-12, ಬ್ಯಾಡಗಿ-1, ಹಾನಗಲ್-6 ಹಾಗೂ ಹಿರೇಕೆರೂರು ತಾಲ್ಲೂಕಿನ ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.