ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಶಿಕ್ಷಕಿ ಸೇರಿ 139 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 2292ಕ್ಕೆ ಏರಿಕೆಯಾದ ಪ್ರಕರಣಗಳು: 25 ಮಂದಿ ಗುಣಮುಖ, ಮೂವರ ಸಾವು
Last Updated 14 ಆಗಸ್ಟ್ 2020, 14:25 IST
ಅಕ್ಷರ ಗಾತ್ರ

ಹಾವೇರಿ:ಶುಶ್ರೂಷಕಿ, ಶಿಕ್ಷಕಿ, ಹೋಂಗಾರ್ಡ್, ಬಿ.ಎಸ್.ಎನ್.ಎಲ್. ನೌಕರ, ಕೆ.ವಿ.ಜಿ.ಬ್ಯಾಂಕ್ ನೌಕರ, ಪಶುವೈದ್ಯ ಇಲಾಖೆ ಸಿಬ್ಬಂದಿ, ಸಾರಿಗೆ ಸಂಸ್ಥೆ ಬಸ್‌ ಚಾಲಕ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ 139 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2292 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1499 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಶುಕ್ರವಾರ ಮೂವರ ಸಾವು ಸೇರಿ ಒಟ್ಟಾರೆ 49 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 744 ಸಕ್ರಿಯ ಪ್ರಕರಣಗಳಿವೆ.

ಶುಕ್ರವಾರ ದೃಢಗೊಂಡ ಪ್ರಕರಣಗಳಲ್ಲಿ ಹಾನಗಲ್-6, ಸವಣೂರು-7, ಬ್ಯಾಡಗಿ-12, ಹಿರೇಕೆರೂರು-13, ಶಿಗ್ಗಾವಿ-29, ರಾಣೆಬೆನ್ನೂರು-34 ಹಾಗೂ ಹಾವೇರಿ ತಾಲ್ಲೂಕಿನಲ್ಲಿ 38 ಮಂದಿಗೆ ಸೋಂಕು ದೃಢಪಟ್ಟಿದೆ.

ಬಿಡುಗಡೆ:ಹಾನಗಲ್ ಹಾಗೂ ಹಿರೇಕೆರೂರಿನ ತಲಾ ಒಬ್ಬರು, ರಾಣೆಬೆನ್ನೂರು ಹಾಗೂ ಹಾವೇರಿ ತಾಲ್ಲೂಕಿನ ತಲಾ ನಾಲ್ವರು ಹಾಗೂ ಶಿಗ್ಗಾವಿ ತಾಲ್ಲೂಕಿನ 15 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಸೋಂಕಿತರ ವಿವರ:ರಾಣೆಬೆನ್ನೂರು ನಗರ-22, ಹಲಗೇರಿ-3, ಚಳಗೇರಿ-2, ನೂಕಾಪುರ ತಂಡಾ, ಬೇಲೂರು, ಕುರಬಗೇರಿ, ಗುಡಿಹೊನ್ನತ್ತಿ, ಯರೇಕುಪ್ಪಿ, ಹರಳಹಳ್ಳಿ, ಕುಪ್ಪೇಲೂರಿನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಹಾವೇರಿನಗರ-22, ಕೋಳೂರು ಹಾಗೂ ಕರ್ಜಗಿ ತಲಾ 3, ದೇವಗಿರಿ, ಕುಳೇನೂರ, ಬೂದಗಟ್ಟಿ ತಲಾ 2, ಹಾವನೂರು, ಹೊಸರಿತ್ತಿ, ವೀರಾಪೂರ ಹಾಗೂ ನೀರಲಗಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಹಿರೇಕೆರೂರು ತಾಲ್ಲೂಕಿನ ರಟ್ಟೀಹಳ್ಳಿ-5, ಹಿರೇಕೆರೂರು-3, ಯಲವಾಳ, ತ್ಯಾವಗರಿಯಲ್ಲಿ ತಲಾ 2, ಹಾಗೂ ಶಿರಗಂಬಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಸವಣೂರು ಪಟ್ಟಣ-5, ತೆವರಮೆಳ್ಳಿಹಳ್ಳಿ ಹಾಗೂ ಹೊಸಳ್ಳಿಯಲ್ಲಿ ತಲಾ ಒಬ್ಬರಿಗೆ, ಹಾನಗಲ್ ಪಟ್ಟಣ-4, ತಿಳ್ಳವಳ್ಳಿ ಹಾಗೂ ನಿಟಗಿನಕೊಪ್ಪದಲ್ಲಿ ತಲಾ ಒಬ್ಬರಿಗೆ ಪಾಸಿಟಿವ್‌ ಬಂದಿದೆ.

ಬ್ಯಾಡಗಿ ಪಟ್ಟಣ-6, ಶಿಡೇನೂರ-4, ಕೆಗ್ಗೊಂಡ ಹಾಗೂ ಗುಡ್ಡಮಲ್ಲಾಪೂರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಶಿಗ್ಗಾಂವ ತಾಲ್ಲೂಕು ಗಂಗೀಭಾವಿ-17, ಬಂಕಾಪುರ-7, ಶಿಗ್ಗಾಂವ-2 ಹಾಗೂ ದುಂಡಶಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮರಣದ ವಿವರ:ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ 50 ವರ್ಷದ ಪುರುಷ (ಪಿ-219489) ತೀವ್ರ ಉಸಿರಾಟದ ತೊಂದರೆಯಿಂದ ಆ.13ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.

ರಾಣೆಬೆನ್ನೂರು ಸಿದ್ಧೇಶ್ವರ ನಗರದ 70 ವರ್ಷದ ಪುರುಷ (ಪಿ-204531) ತೀವ್ರ ಉಸಿರಾಟದ ತೊಂದರೆಯಿಂದ ಆ.11 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಆ.13ರಂದು ಮೃತಪಟ್ಟಿದ್ದಾರೆ ಹಾಗೂ ಶಿಗ್ಗಾವಿ ತಾಲ್ಲೂಕು ಬಂಕಾಪುರದ 60 ವರ್ಷದ ಪುರುಷ (ಪಿ-220765) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 14ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ. ಈ ಮೂವರನ್ನು ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT