ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ದೇವಸ್ಥಾನ ಮುಚ್ಚಲು ಆದೇಶ

Last Updated 17 ಏಪ್ರಿಲ್ 2021, 14:56 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ಭಾರತ ಸರ್ಕಾರದ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಜಿಲ್ಲೆಯ ಸಂರಕ್ಷಿತ ಸ್ಮಾರಕಗಳು, ಪ್ರದೇಶಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ಮೇ 15ರವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ಹಾವೇರಿ ತಾಲ್ಲೂಕಿನ ಬಾಳಂಬೀಡ ಕಲ್ಮೇಶ್ವರ ದೇವಸ್ಥಾನ, ಗಳಗನಾಥದ ಗ್ರಾಮದ ಗಳಗನಾಥೇಶ್ವರ ದೇವಸ್ಥಾನ, ಹರಳಹಳ್ಳಿ ಸೋಮೇಶ್ವರ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನದಿಂದ ಉತ್ತರ ಸೋಮೇಶ್ವರ ದೇವಸ್ಥಾನದವರೆಗೆ, ಹಾವೇರಿ ಪುರಸಿದ್ಧೇಶ್ವರ ದೇವಸ್ಥಾನ, ಶಿಗ್ಗಾವಿ ತಾಲ್ಲೂಕು ಬಂಕಾಪುರದ ನಗರೇಶ್ವರ ದೇವಸ್ಥಾನಗಳನ್ನು ಮುಚ್ಚಬೇಕು.

ರಾಣೆಬೆನ್ನೂರು ತಾಲ್ಲೂಕಿನ ಚೌಡದಾನಪುರದ ಮುಕ್ತೇಶ್ವರ ದೇವಸ್ಥಾನ, ಹಾನಗಲ್‍ನ ಬಳ್ಳೇಶ್ವರ ದೇವಸ್ಥಾನ, ತಾರಕೇಶ್ವರ, ವೀರಭದ್ರೇಶ್ವರ ದೇವಸ್ಥಾನ, ಹಾನಗಲ್ ಕೋಟೆ, ನರೇಗಲ್‍ನ ಸರ್ವೇಶ್ವರ ದೇವಸ್ಥಾನ, ರಟ್ಟಿಹಳ್ಳಿ ತಾಲ್ಲೂಕು ಕಂದಂಬೇಶ್ವರ ದೇವಸ್ಥಾನವನ್ನು ಸಾರ್ವಜನಿಕರ ಸಂದರ್ಶನಕ್ಕೆ ಸರ್ಕಾರದ ಮುಂದಿನ ಆದೇಶದವರೆಗೆ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಪುರಾತತ್ವ ಇಲಾಖೆಯ ಸ್ಥಳೀಯ ಅಧಿಕಾರಿಗಳು ಸೂಕ್ತ ಕ್ರಮವಹಿಸಲು ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT