ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡಕ್ಕೆ ಬರುತ್ತಿದ್ದು, ಮಾಲತೇಶ ದೇವಸ್ಥಾನದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಪೊಲೀಸರು ಮುಖ್ಯ ಗೇಟ್ ಬಂದ್ ಮಾಡಿದ್ದಾರೆ.
ಸಂಜೆ 4 ಗಂಟೆಯವರೆಗೂ ದರ್ಶನ ಬಂದ್ ಮಾಡಿರುವುದಾಗಿ ಘೋಷಿಸಲಾಗಿದೆ.
ಬೆಂಗಳೂರಿನಿಂದ ವಿಮಾನದ ಮೂಲಕ ಮುಖ್ಯಮಂತ್ರಿ ಅವರು ಹುಬ್ಬಳ್ಳಿಗೆ ಬರುತ್ತಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ದೇವರಗುಡ್ಡಕ್ಕೆ ಬರುತ್ತಿದ್ದಾರೆ.
ಮುಖ್ಯಮಂತ್ರಿ ಬರುವುದು ಗಂಟೆ ತಡವಾಗುವುದಾಗಿ ಜಿಲ್ಲಾಡಳಿತ ಹೇಳಿದೆ. ಇದರ ನಡುವೆಯೇ ದೇವಸ್ಥಾನದ ಪ್ರಮುಖ ಗೇಟ್ ಬಂದ್ ಮಾಡಲಾಗಿದೆ.
ಇದರಿಂದಾಗಿ ದೇವರ ದರ್ಶನಕ್ಕೆ ಬಂದಿರುವ ಭಕ್ತರು, ಮುಖ್ಯ ಗೇಟ್ ಹೊರಗೆ ಕಾಯುತ್ತ ನಿಂತಿದ್ದಾರೆ.
'ಇದು ಸುಕ್ಷೇತ್ರ. ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಸಿದ್ದರಾಮಯ್ಯ ಬರುವುದು ಇನ್ನು ಒಂದು ಗಂಟೆ ತಡವಾಗಲಿದೆ. ಬೇಗನೇ ಗೇಟ್ ಬಂದ್ ಮಾಡುವುದು ಸರಿಯಲ್ಲ' ಎಂದು ಭಕ್ತರು ಹೇಳಿದರು.