ಗುರುವಾರ , ಮೇ 13, 2021
22 °C

ಸರ್ಕಾರಿ ವಾಹನ ಚಾಲಕರ ಪದಗ್ರಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕರ್ನಾಟಕ ರಾಜ್ಯ ಸರ್ಕಾರದ ವಾಹನ ಚಾಲಕರ ಸಂಘದ ಜಿಲ್ಲಾ ಶಾಖೆ ಹಾವೇರಿಯ ಪ್ರದಗ್ರಹಣ ಸಮಾರಂಭ ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಈಚೆಗೆ ನಡೆಯಿತು. 

ಹಾವೇರಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಸವರಾಜ ಈಳಿಗೇರ, ಗೌರವಾಧ್ಯಕ್ಷರಾಗಿ ಎಚ್.ಎಂ.ನಾಯ್ಕ, ಉಪಾಧ್ಯಕ್ಷರಾಗಿ ಸಿ.ಬಿ.ಪಾಟೀಲ್, ಕಾರ್ಯದರ್ಶಿಯಾಗಿ ಮೋಹನ್ ಎಂ. ಹಲುವಾಗಲ, ಖಜಾಂಚಿಯಾಗಿ ಗುಡ್ಡಪ್ಪ ಸಿ, ಸಂಘಟನಾ ಕಾರ್ಯದರ್ಶಿಯಾಗಿ ಸುಭಾಸ ಕುಮರಿ, ಜಂಟಿ ಕಾರ್ಯದರ್ಶಿಯಾಗಿ ಶಿವು ಬಣಕಾರ, ಸಂಚಾಲಕರಾಗಿ ಎಸ್.ಎಸ್. ಹಾವಣಗಿ ಆಯ್ಕೆಯಾದರು.

ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಮೃತಗೌಡ ಪಾಟೀಲ್ ಹಾಗೂ ರಾಜ್ಯ ಪರಿಷತ್ ಸದಸ್ಯರಾದ ಎಸ್.ಜಿ ಸುಣಗಾರ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.