ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಧೃತಿಗೆಡಬಾರದು: ಬಿ.ಸಿ.ಪಾಟೀಲ

Last Updated 1 ಸೆಪ್ಟೆಂಬರ್ 2022, 16:58 IST
ಅಕ್ಷರ ಗಾತ್ರ

ಹಿರೆಕೇರೂರು: ರಾಜ್ಯದಾದ್ಯಂತಸುರಿದ ಮಳೆ ರೈತರ ಪಾಲಿಗೆ ಶಾಪವಾಗಿದೆ. ಸಮೃದ್ದ ಬೆಳೆಯ ಕನಸು ಕಾಣುವ ರೈತನ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದೆ. ರೈತರು ಧೃತಿಗೆಡಬಾರದು. ಸರ್ಕಾರ ಅವರ ನೆರವಿಗೆ ಬರುತ್ತದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಯ ಪರಿಣಾಮ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಕೋಡದಲ್ಲಿ ಗ್ರಾಮದ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಾಕೃತಿಕ ವಿಕೋಪಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ನಮ್ಮ ಸರ್ಕಾರ ಧಾವಿಸುತ್ತಿದೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬಿ ಕೃಷಿಯಿಂದ ರೈತರನ್ನು ವಿಮುಖವಾಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಕೃಷಿಯನ್ನು ನಿರ್ಲಕ್ಷ್ಯ ಮಾಡಿದರೆ ನಾಡಿನ ಜನತೆಯ ಜೀವನ ಅಸ್ತವ್ಯಸ್ತವಾಗುತ್ತದೆ ಎಂದರು.

ರೈತ ಸಮುದಾಯದ ಬಗ್ಗೆ ಕೃಷಿ ಇಲಾಖೆ ಅಪಾರ ಕಾಳಜಿ ಹೊಂದಿದೆ. ರೈತರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾ ಸ್ಪಂದಿಸುತ್ತಾ ಬೆನ್ನೆಲುಬಾಗಿ ನಿಂತಿವೆ ಎಂದು ಹೇಳಿದರು.

ಸಮೀಕ್ಷೆ ಮುಗಿದ ಕೂಡಲೇ ಪರಿಹಾರ

ಹಂಸಭಾವಿ: ಈ ವರ್ಷ ಮಳೆಗಾಲ ನಿರೀಕ್ಷೆಗೂ ಹೆಚ್ಚಾಗಿ ಸುರಿಯುತ್ತಿದೆ ಹೀಗಾಗಿ ರೈತರು ಬೆಳೆದ ಬೆಳೆ ಹಾಳಾಗುತ್ತಿದೆ. ಇದರಿಂದ ಯಾವುದೇ ಕಾರಣಕ್ಕೂ ರೈತರು ಎದೆಗುಂದದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಸರ್ಕಾರ ರೈತರ ನೆರವಿಗೆ ಧಾವಿಸಲಿದೆ ಎಂದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಗ್ರಾಮದಲ್ಲಿ ಬುಧವಾರ ಮಳೆಯಿಂದ ಹಾನಿಗೊಳಗಾದ ಕೃಷಿ ಜಮೀನು ವೀಕ್ಷಣೆ ಮಾಡಿ ಬಳಿಕ ಅವರು ಮಾತಮಾಡಿದರು.

ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನೇನು ಸಮೀಕ್ಷೆ ಮುಕ್ತಾಯದ ಹಂತದಲ್ಲಿದೆ. ಕೂಡಲೇ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡಲಿದೆ. ಮುಂದಿನ ತಿಂಗಳು ಕಿಸಾನ್‌ ಸಮ್ಮಾನ್‌ ನಿಧಿಯ ಹಣ ಬಿಡುಗಡೆಯಾಗಲಿದ್ದು, ಪ್ರತಿಯೊಬ್ಬ ರೈತರೂ ಇ– ಕೆವೈಸಿ ಮಾಡಿಸಬೇಕು. ಮಳೆಯಿಂದ ರಸ್ತೆಗಳೂ ಸಂಪೂರ್ಣ ಹಾನಿಯಾಗಿವೆ. ಇದರ ಸಮೀಕ್ಷೆಯನ್ನೂ ನಡೆಸಿ ಹಾಳಾದ ಕಡೆ ರಸ್ತೆ ಸರಿಪಡಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ಬೊಮ್ಮಣ್ಣನವರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಎಂ.ವಿ, ಮುಖಂಡರಾದ ದೊಡ್ಡಗೌಡ ಪಾಟೀಲ, ರಾಜಶೇಖರ ಹುಚ್ಚಗೊಂಡರ, ನಾಗರಾಜ ಯಲ್ಲಕ್ಕನವರ, ಶಿವಯೋಗಿ ಹುಚ್ಚಗೊಂಡರ, ಮೌನೇಶಗೌಡ ಪಾಟೀಲ, ಲಿಂಗರಾಜ ಎಲಿ,ಮುಸ್ತಪಾ ಪ್ಯಾಟಿ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT