ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಿಗಳಿಗೆ ‘ಹುಳಿ’ಯಾದ ದ್ರಾಕ್ಷಿ; ಈರುಳ್ಳಿ ಬೆಲೆ ಸ್ಥಿರ

ಮಾರುಕಟ್ಟೆಗೆ ಹೆಚ್ಚಿನ ಆವಕದಿಂದ ಬೆಲೆ ಇಳಿಕೆ
Last Updated 23 ಜನವರಿ 2020, 19:45 IST
ಅಕ್ಷರ ಗಾತ್ರ

ಹಾವೇರಿ: ನಗರದ ಮಾರುಕಟ್ಟೆಗೆ ವಾರದಿಂದ ದ್ರಾಕ್ಷಿ ಹಣ್ಣಿನ ಸೀಜನ್‌ಆರಂಭವಾಗಿದ್ದು, ಹೆಚ್ಚಿನ‍‍ಪ್ರಮಾಣದಲ್ಲಿ ಆವಕವಾಗುತ್ತಿದೆ.

ಮಾರುಕಟ್ಟೆಗೆ ಹಸಿರು ಹಾಗೂ ಕಪ್ಪು ದ್ರಾಕ್ಷಿ ಆವಕವಾಗಿದೆ. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೆ, ಬೆಲೆಯೂ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಸೀಜನ್‌ ಆರಂಭವಾದಾಗ (ಡಿಸೆಂಬರ್‌) ದ್ರಾಕ್ಷಿ ಹಣ್ಣು ₹120ರಂತೆ ಮಾರಾಟವಾಗುತ್ತಿತ್ತು. ಆದರೆ, ಹಣ್ಣು ಹುಳಿಯಾಗಿರುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿರುವುದರಿಂದ ₹80 ರಿಂದ ₹60 ರಂತೆ ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಿ ಮಹಮದ್‌ ತಿಳಿಸಿದರು.

ಹಣ್ಣು ತಿನ್ನಬೇಕು ಎನ್ನುವವರು ಖರೀದಿಸಿ ತಿನ್ನುತ್ತಿದ್ದಾರೆ. ಶಿವರಾತ್ರಿ ಹಬ್ಬ ಹತ್ತಿರವಾಗುತ್ತಿದ್ದಂತೆಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಅಲ್ಲದೆ, ಬಿಸಿಲು ಹೆಚ್ಚಾದರೆ ದ್ರಾಕ್ಷಿ ಹಣ್ಣಿನ ಗಾತ್ರ ಹಾಗೂ ರುಚಿ ಎರಡು ಹೆಚ್ಚಾಗುತ್ತದೆ. ಕಪ್ಪು ದ್ರಾಕ್ಷಿ ಹಣ್ಣು ₹120 ರಂತೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

‘ಹಣ್ಣಿನ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ. ಸೇಬು ₹ 100ರಿಂದ ₹ 120, ದಾಳಿಂಬೆ ₹ 100, ಕಿತ್ತಳೆ ₹ 100, ಮೂಸಂಬಿ ₹ 100, ಸ್ಟ್ರಾಬೆರಿ ಬಾಕ್ಸ್‌ಗೆ ₹ 100, ಕಿವಿ ಹಣ್ಣು ಬಾಕ್ಸ್‌ಗೆ ₹ 60ರಿಂದ ₹ 80ರಂತೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿ ಮೆಹಬೂಬಲಿ ತಿಳಿಸಿದರು.

ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಹಾಗೂ ಆಲೂಗೆಡ್ಡೆ ಬೆಲೆ ಸ್ಥಿರವಾಗಿದೆ. ಈರುಳ್ಳಿ ಕೆ.ಜಿಗೆ ₹35 ರಿಂದ ₹50ರವರೆಗೆ ಹಾಗೂ ಆಲೂಗಡ್ಡೆ ₹40 ರಂತೆ ಮಾರಾಟವಾಗುತ್ತಿದೆ. ಹಿಂದಿನ ವಾರದ ಬೆಲೆಯೇ ಇದೆ. ಅಲ್ಲದೆ, ನಿಂಬೆ ಹಣ್ಣು ಕೂಡ ₹10ಕ್ಕೆ ಹತ್ತು ಮಾರಾಟವಾಗುತ್ತಿದೆ ಎಂದು ವ್ಯಾಪಾರಿ ತೌಸಿಫ್‌ ಕೋಣನತಂಬಗಿ ತಿಳಿಸಿದರು.

ಟೊಮೆಟೊ ಬೆಲೆ ಇಳಿಕೆ:

ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಕೆಲವು ಕಡೆ ಕೆ.ಜಿ.ಗೆ 10 ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ₹10ಕ್ಕೆ ಎರಡು ಕೆಜಿಯಂತೆ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಮುರ್ನಾಸಾಬ್‌ ತಿಳಿಸಿದರು.

ಈ ವಾರ ಮಾರುಕಟ್ಟೆಯಲ್ಲಿ ಸೌತೆಕಾಯಿ ₹ 30, ಬದನೆಕಾಯಿ (ಮುಳಗಾಯಿ) ಮತ್ತು ಮೆಣಸಿನಕಾಯಿ ₹ 40, ಬೀನ್ಸ್‌ ₹ 40, ಚವಳಿಕಾಯಿ ₹ 40, ಹೀರೇಕಾಯಿ, ಬೆಂಡೆಕಾಯಿ ₹ 40, ಹಾಗಲಕಾಯಿ ₹ 50, ಇದೆ. ಅಲ್ಲದೆ, ಕ್ಯಾರೆಟ್‌ ₹ 50, ಬೀಟ್‌ರೂಟ್‌ ₹ 50, ಕ್ಯಾಬೇಜ್‌ ₹ 30, ಹೂಕೋಸು ₹ 30ರಂತೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ತೌಸಿಫ್‌ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT