ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನಯೋಗಿ ಪಂಚಾಕ್ಷರಿ ಸಂಗೀತ ಉತ್ಸವ: ‘ಗುರುಕುಮಾರ ಪಂಚಾಕ್ಷರಿ’ ಪ್ರಶಸ್ತಿ ಪ್ರದಾನ

ಗಮನಸೆಳೆದ ಸಂಗೀತ ಪ್ರದರ್ಶನ
Last Updated 12 ಜನವರಿ 2022, 16:24 IST
ಅಕ್ಷರ ಗಾತ್ರ

ಹಾವೇರಿ: ಧಾರವಾಡದ ಪಂಡಿತ್‌ ಬಿ.ಎಸ್‌. ಮಠ ಮತ್ತು ವಿದುಷಿ ಅಕ್ಕಮಹಾದೇವಿ ಬಿ.ಮಠ ದಂಪತಿ ಹಾಗೂ ಹೊನ್ನಾವರದ ಡಾ.ಅಶೋಕ ಹುಗ್ಗಣ್ಣವರ ಅವರಿಗೆ ‘ಗುರುಕುಮಾರ ಪಂಚಾಕ್ಷರಿ ಸಮ್ಮಾನ–2022’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗದಗದ ಗುರು ಪಂಚಾಕ್ಷರಿ ಸೇವಾ ಸಮಿತಿ ಮತ್ತು ಹುಕ್ಕೇರಿಮಠದ ಆಶ್ರಯದಲ್ಲಿ ನಗರದ ಹುಕ್ಕೇರಿಮಠದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ, ಪಂಚಾಕ್ಷರಿ ಗದಗ ಘರಾನಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೊನ್ನಾವರದ ಡಾ.ಅಶೋಕ ಹುಗ್ಗಣ್ಣವರ ಮಾತನಾಡಿ, ಸಂಗೀತ ಪ್ರೇಮಿಗಳು ಮತ್ತು ಶ್ರೀಮಠದ ಭಕ್ತರ ಸಾನ್ನಿಧ್ಯದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಮನಸ್ಸಿಗೆ ಅತ್ಯಂತ ಸಂತೋಷ ತಂದಿದೆ’ ಎಂದರು.

ಪಂಡಿತ್‌ ಬಿ.ಎಸ್‌.ಮಠ ಮಾತನಾಡಿ, ‘ನಾನು ಶಾಲೆ ಕಲಿತವನಲ್ಲ. ಬಾಲ್ಯದಲ್ಲಿ ಪುಟ್ಟರಾಜ ಅಜ್ಜನವರ ಸೇವೆ ಮಾಡಿದ್ದೇನೆ. ಅವರ ಕೃಪೆಯಿಂದ ಸಂಗೀತ ಕಲಿತೆ. ಇಂದು ಅವರ ಆಶೀರ್ವಾದದಿಂದ ಪ್ರಶಸ್ತಿ ದೊರೆತಿದೆ’ ಎಂದು ಹೇಳಿದರು.

ವೀರಯೋಧ ದಿವಂಗತ ಹನುಮಂತಪ್ಪ ಚೂರಿ ಅವರ ಧರ್ಮಪತ್ನಿ ಪುಟ್ಟಮ್ಮ ಚೂರಿ ಅವರನ್ನು ಸನ್ಮಾನಿಸಲಾಯಿತು. ಗದಗದ ಡಾ.ಶಿವಬಸಯ್ಯ ಎಸ್‌. ಗಡ್ಡದಮಠ ಅವರ ಗಾಯನ ಕಾರ್ಯಕ್ರಮ ಮತ್ತು ಧಾರವಾಡದ ವೀಣಾ ದಂಡಾವತಿಮಠ ಅವರ ವೀಣಾ ವಾದನ ಗಮನಸೆಳೆಯಿತು.

ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಕರ್ಜಗಿಯ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಡಲದ ಗುರು ನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನವರ, ಗುರು ಪಂಚಾಕ್ಷರಿ ಸೇವಾ ಸಮಿತಿಯ ಅಧ್ಯಕ್ಷ ಪಂಡಿತ್‌ ರಾಜಗುರು ಗುರುಸ್ವಾಮಿ ಕಲಿಕೇರಿ, ಉಪಾಧ್ಯಕ್ಷ ಮಹೇಶ್ವರಸ್ವಾಮೀಜಿ ಹೊಸಹಳ್ಳಿಮಠ, ಶಿವಲಿಂಗಯ್ಯಶಾಸ್ತ್ರಿ ಸಿ.ಹಿರೇಮಠ, ಎಂ.ಎಂ.ಶಿರೋಳಮಠ, ಸಿದ್ಧಲಿಂಗಯ್ಯಶಾಸ್ತ್ರಿ ಗಡ್ಡದಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT