ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಮಾಡದೇ ಇರೋದು ಜನಾಂಗದ ಪ್ರೀತಿನಾ: ಎಚ್‌.ವಿಶ್ವನಾಥ್‌ ವಾಗ್ದಾಳಿ

Last Updated 15 ಜನವರಿ 2021, 15:18 IST
ಅಕ್ಷರ ಗಾತ್ರ

ಹಾವೇರಿ: ‘2013ರಿಂದ 2018ರವರೆಗಿನ ಸರ್ಕಾರದಲ್ಲಿ ಒಬ್ಬ ಕುರುಬ ಮಂತ್ರಿನೂ ಇರಲಿಲ್ಲ. ಕೊನೆಯ ಅವಧಿಯಲ್ಲಿ ಎಚ್‌.ಎಂ. ರೇವಣ್ಣ ಅವರನ್ನು ಮಂತ್ರಿ ಮಾಡಿದರು. ಮಂತ್ರಿ ಮಾಡದೇ ಇರೋದು ಜನಾಂಗದ ಪ್ರೀತಿನಾ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಅವರು‌ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಗಿನೆಲೆಯಲ್ಲಿ ಶುಕ್ರವಾರ ನಡೆದ ಕುರುಬರಿಗೆ ಎಸ್‌.ಟಿ. ಮೀಸಲಾತಿಗಾಗಿ ಒತ್ತಾಯಿಸಿ ‘ಐತಿಹಾಸಿಕ ಪಾದಯಾತ್ರೆ’ಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಹೋರಾಟದಲ್ಲಿ ಸ್ವಾಮೀಜಿಗಳು ಹಾಗೂ ಕಾರ್ಣಿಕ ಹೇಳುವ ರಾಮಣ್ಣನವರು ಇದ್ದಾರೆ. ಕಾರ್ಣಿಕಕ್ಕೆ ಸತ್ಯವಿದೆ. ಕಾರ್ಣಿಕ ಹೇಳೋರನ್ನೇ ಕಾಗೋಡು ತಿಮ್ಮಪ್ಪನವರು ಜೈಲಿಗೆ ಕಳಿಸಬೇಕು ಎಂದಿದ್ದರು. ಆಗ ಕಾಂಗ್ರೆಸ್‌ ಸೋತು ಹೋಯಿತು. ಚರಿತ್ರೆ ಏನಾದರೂ ಇದ್ದರೆ ಅದು ಕುರುಬರ ಚರಿತ್ರೆ. ವೀರಶೈವರೇ ಮುಖ್ಯಮಂತ್ರಿ ಆಗಿದ್ದರೂ ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಪಾದಯಾತ್ರೆ ಮಾಡ್ತಿದ್ದಾರೆ’ ಎಂದು ಯಡಿಯೂರಪ್ಪನವರ ವಿರುದ್ಧವೂ ಅಸಮಾಧಾನ ಹೊರಹಾಕಿದರು.

ಸಿದ್ದರಾಮಯ್ಯ ನಮ್ಮ ಸಮಾಜದ ನಾಯಕರು. ಅವರು ಬಿಜೆಪಿಯವರನ್ನು ಬ್ಲಾಕ್‌ಮೇಲ್‌ ಅಂದಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಎಸ್ಟಿ ಹೋರಾಟಕ್ಕೆ ವಿರೋಧವಿಲ್ಲ ಅನ್ನೋರು ಇದೆಲ್ಲ ಯಾಕೆ ಮಾತಾಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT