ಹಾವೇರಿ: ನಗರದಲ್ಲಿರುವ ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಮತದಾನ ಪ್ರಕ್ರಿಯೆ ಸುಗಮವಾಗಿ ಮುಕ್ತಾಯಗೊಂಡಿದೆ. ಚುನಾವಣೆಗೆ ಸ್ಪರ್ಧಿಸಿದ್ದ 77 ಅಭ್ಯರ್ಥಿಗಳ ಪೈಕಿ, 33 ಅಭ್ಯರ್ಥಿಗಳು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ನಗರದ ಮುನ್ಸಿಪಲ್ ಹೈಸ್ಕೂಲ್ನಲ್ಲಿ 20 ಮತಗಟ್ಟೆಗಳ ಮೂಲಕ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮತದಾನ ಜರುಗಿತು. ಬಳಿಕ ಆರಂಭವಾದ ಮತ ಎಣಿಕೆ ಪ್ರಕ್ರಿಯೆ, ಸೋಮವಾರ ನಸುಕಿನ 3 ಗಂಟೆಯವರೆಗೂ ನಡೆಯಿತು.

ಹೆಚ್ಚು ಮತಗಳನ್ನು ಪಡೆದ ಆಧಾರದಲ್ಲಿ ನೂತನ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಲಾಯಿತು.

ಫಲಿತಾಂಶ ಹೊರಬೀಳುತ್ತಿದ್ದಂತೆ ನೂತನ ಪದಾಧಿಕಾರಿಗಳ ಬೆಂಬಲಿಗರು, ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಂಭ್ರಮ ಆಚರಿಸಿದರು. ಹೂವಿನ ಹಾರ ಹಾಕಿ ಪರಸ್ಪರ ತಬ್ಬಿಕೊಂಡು ನೂತನ ಸದಸ್ಯರನ್ನು ಅಭಿನಂದಿಸಿದರು.

ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ತಮ್ಮ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುವಂತೆ ಮತದಾರರನ್ನು ಕೋರುತ್ತಿದ್ದರು. ಕೆಲ ಅಭ್ಯರ್ಥಿಗಳ ಬೆಂಬಲಿಗರು, ಪೆಂಡಾಲ್ ಹಾಕಿಕೊಂಡು ಕುಳಿತಿದ್ದರು.

‘ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ಚುನಾವಣೆಗೆ 5,057 ಮತದಾರರು ಹೆಸರು ನೋಂದಣಿ ಮಾಡಿಸಿದ್ದರು. ಈ ಪೈಕಿ 4,513 ಮತದಾರರು, ಭಾನುವಾರ ಮತ ಚಲಾವಣೆ ಮಾಡಿದರು. ತಪ್ಪಾದ ನಮೂದು ಹಾಗೂ ಇತರೆ ಕಾರಣಗಳಿಂದಾಗಿ 287 ಮತಗಳು ಅಸಿಂಧುಗೊಂಡಿವೆ’ ಎಂದು ಚುನಾವಣಾ ಅಧಿಕಾರಿ ಅಮೀರ್ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘4,226 ಮತಗಳು ಮಾತ್ರ ಕ್ರಮಬದ್ಧವಾಗಿವೆ. ಶೇ 89.24ರಷ್ಟು ಮತದಾನವಾಗಿದೆ. ಸೋಮವಾರ ನಸುಕಿನಲ್ಲಿಯೇ ಫಲಿತಾಂಶ ಪ್ರಕಟಿಸಲಾಗಿದೆ’ ಎಂದರು.

ಆಯ್ಕೆಯಾದ ನೂತನ ಪದಾಧಿಕಾರಿಗಳು

ಹುಸೇನ್ಸಾಬ್ (ಜಮೀರ್) ಎಂ. ಜಿಗರಿ ಇರ್ಫಾನ್ಖಾನ್ ಪಠಾಣ ಸೈಯದ್ ಮುಜಾಫರ್ ಕೊಟ್ಟಿಗೇರಿ ನಫ್ತಾರ್ ಅಹ್ಮದ್ ಗುಡಗೇರಿ ಅನ್ವರಸಾಬ್ ಕಡೇಮನಿ ಹಜರತ್ ಅಲಿ ತಹಶೀಲ್ದಾರ್ ಅಯೂಬ್ಖಾನ್ ಬಸವನಕೊಪ್ಪ ಬಾಬುಲಾಲ್ ಬಾಲೆಬಾಯಿ ಅಜ್ಮತ್ ಉಲ್ಲಾ ಶೇಖ್ ಮದಾರಸಾಬ್ ಹುಂಬಿಗೇರಿ ಮೊಹಮ್ಮದ್ ಸಾದಿಕ್ ಮೇಲ್ಮುರಿ ಚಮನ್ ಷರೀಪ್ ಮುಲ್ಲಾ ಆಶಾಪಕ್ಹ್ಮದ್ ಹಸೀನವಾಲೆ ಇಸ್ಮಾಯಲ್ ಲಾಬೇರ್ ಮೊಹಮ್ಮದ್ ಗೌಸ್ ನದಾಫ್ ಪೀರಸಾಬ್ ಚೋಪದಾರ್ ಸಾದಿಕ್ ಸವಣೂರು ಹಸನರಾಜ್ ಅತ್ತಾರ ಇಮಾಮ್ಹುಸೇನ್ ಬಾಲೆಬಾಯಿ ಇಮ್ರಾನ್ಬಾಷಾ ಅಬ್ದುಲ್ಖಾದರ್ ಹೊಂಬರಡಿ ಖಮರಲಿ ಕಲ್ಯಾಣಿ ಮನ್ಸೂರಅಲಿ ಮುಲ್ಲಾ ಇಜಾಜ್ ಅಹ್ಮದ್ ಮೊರಟಗಿ ಶೋಯೆಬ್ ಹುಸೇನ್ ಬಡಿಗೇರ ವಸೀಂ ಅಹ್ಮದ್ ಸಾನ್ನುಕ್ಕನವರ ಅಕ್ಬರ್ಖಾನ್ ಶಿರಸಿ (ಎಂ.ಎಸ್. ಮುನ್ನಾ) ಮಹಮ್ಮದ್ಸಾದಿಕ್ ಕಬ್ಬೂರ ಮುಕ್ತಾರ್ಅಹ್ಮದ್ ತಟ್ಟಿಮನಿ ಇರ್ಷಾದ್ ಅಲಿ ಜಮಾದಾರ ರಫೀಕ್ಅಹ್ಮದ್ ಸವಣೂರ ಖಾಸೀಂಸಾಬ್ ಅಗಡಿ ಮಹಬೂಬ್ಸಾಬ್ ದೇವಿಹೊಸೂರು ಆದಿಲ್ ಸಲೀಂಸಾಬ್ ಚಳ್ಯಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.