ಗುತ್ತಲ: ಟಿವಿ, ಮೊಬೈಲ್ ನೋಡುತ್ತಾ ಸಮಯ ವ್ಯರ್ಥ ಮಾಡಬೇಡಿ. ಬಿಡುವಿನ ವೇಳೆಯಲ್ಲಿ ತಂದೆ ತಾಯಿಗಳಿಗೆ ಕೆಲಸದಲ್ಲಿ ಸಹಾಯ ಮಾಡಿ. ಉತ್ತಮ ಗುಣಗಳನ್ನು ರೂಢಿಸಿಕೊಳ್ಳಿ ಎಂದು ಹಾವೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ್ ಹೇಳಿದರು.

ಮಂಗಳವಾರ ಇಲ್ಲಿಗೆ ಸಮೀಪದ ಬಮ್ಮನಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ತಿಂಗಳ ಅತಿಥಿ ಕಾರ್ಯಕ್ರಮವನ್ನು ದ್ವೇಷಿಸಿ ಅವರು ಮಾತನಾಡಿದರು.

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾರ್ಗದರ್ಶನ ನೀಡಿದರು. ತಮ್ಮ ಬಾಲ್ಯ ದ ಜೀವನ, ಶಿಕ್ಷಣ , ಹಾಗೂ ತಾವು ಆ ಕಾಲದಲ್ಲಿ ಶಿಕ್ಷಣಕ್ಕಾಗಿ ಪಟ್ಟ ಶ್ರಮದ ಕುರಿತು ಮಾತನಾಡಿದರು.

ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶ್ರಮವಹಿಸಿ ಓದಬೇಕು, ಪ್ರತಿ ದಿನ ತಪ್ಪದೆ ಶಾಲೆಗೆ ಬರಬೇಕು, ಎಂದು ಅವರು ಹೇಳಿದರು.

ಚೆನ್ನಾಗಿ ಓದಿದರೆ ನೀವು ಕೂಡ ಉನ್ನತ ಅಧಿಕಾರಿಗಳಾಗಬಹುದು, ಆಗ ಒಳ್ಳೆಯ ಕಾರು,ಮನೆ, ಮುಂತಾದ ಸೌಲಭ್ಯಗಳನ್ನು ಹೊಂದಬಹುದು, ಒಬ್ಬ ಜಿಲ್ಲಾಧಿಕಾರಿ ಆದರೆ ಮನೆ ಕೆಲಸಕ್ಕೆ ಆಳು ಮನೆ ಸೇರಿದಂತೆ ಎಲ್ಲವನ್ನೂ ಪಡೆಯಬಹುದು ಎಂದು ಹೇಳಿದರು .

ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ತಿಳಿಸಿದರು. ಕಾರ್ಯಕ್ರಮದಲ್ಲಿ ಪಿ.ವಿ.ತೋಟಿಗೇರ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಓಂ ಪ್ರಕಾಶ್ ಯತ್ತಿನಳ್ಳಿ, ಭಗವಂತ ಗೌಡರ್, ಮುಖ್ಯಶಿಕ್ಷಕ ಸಿ.ಪ್ರದೀಪ್ ಕುಮಾರ್ ಹಾಗೂ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ದುರುಗಣ್ಣನವರ್, ಸದಸ್ಯರಾದ ರುದ್ರಗೌಡ ಪಾಟೀಲ್, ಅಶೋಕ್ ಸೊಪ್ಪಿನ, ಕುರುವತ್ತೆಪ್ಪ ಐನಳ್ಳಿ, ಬಸವರಾಜ ಬನ್ನಿಮಟ್ಟಿ, ಗ್ರಾ ಪಂ ಸದಸ್ಯರಾದ ಎಚ್.ಎಚ್.ಓಲೇಕಾರ್, ನಾಗಪ್ಪ ಕರೆಮ್ಮನವರ್ ಸೆರಿದಂತೆ ಇನ್ನು ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.