ಹಾವೇರಿ: ಭದ್ರತಾ ಕೊಠಡಿ ಸೇರಿದ ಇವಿಎಂ

7

ಹಾವೇರಿ: ಭದ್ರತಾ ಕೊಠಡಿ ಸೇರಿದ ಇವಿಎಂ

Published:
Updated:
Deccan Herald

ಹಾವೇರಿ:  ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ಮತದಾನದ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಆಯಾ ವ್ಯಾಪ್ತಿಯ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಸೆ.3ರಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಳ್ಳಲಿದ್ದು, 11 ಗಂಟೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 31 ವಾರ್ಡ್ ಹೊಂದಿರುವ ಹಾವೇರಿ ಮತ್ತು 35 ವಾರ್ಡ್‌ನ ರಾಣೆಬೆನ್ನೂರು ನಗರಸಭೆಗಳ ಮತ ಎಣಿಕೆಗೆ 8 ಟೇಬಲ್‌ಗಳನ್ನು ಮಾಡಲಾಗಿದೆ. ಉಳಿದಂತೆ ಮೂರರಿಂದ ನಾಲ್ಕು ಟೇಬಲ್‌ ಬಳಸಲು ಆಯೋಗ ನಿರ್ಧರಿಸಿದೆ. ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು, ‘ಡಿ’ ದರ್ಜೆ ನೌಕರ, ಲೆಕ್ಕ ಸಹಾಯಕರನ್ನು ನಿಯೋಜಿಸಲಾಗಿದೆ.

ಶುಕ್ರವಾರ ಮತದಾನ ನಡೆದಿದ್ದು, ಸಂಜೆಯೇ ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ. ಪ್ರತಿ ಭದ್ರತಾ ಕೊಠಡಿಗೆ ಒಬ್ಬರು ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌, ಐವರು ಕಾನ್‌ಸ್ಟೆಬಲ್, ಜಿಲ್ಲಾ ಮೀಸಲು ಪಡೆ ತುಕಡಿ ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರ:  ಹಾವೇರಿ ನಗರಸಭೆಯ ಮತಏಣಿಕೆಯು ನಗರದ ರಾಚೋಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ, ರಾಣೆಬೆನ್ನೂರು– ಸೇಂಟ್ ಲಾರೆನ್ಸ್ ಸ್ಕೂಲ್, ಸವಣೂರು– ಸರ್ಕಾರಿ ಪ್ರಾಥಮಿಕ ಶಾಲೆ ನಂ. 2 ಹಾಗೂ ಹಾನಗಲ್‌ ಹಾಗೂ ಹಿರೇಕೆರೂರು ಮತ ಏಣಿಕೆ ಆಯಾ ತಹಶೀಲ್ದಾರ್ ಕಚೇರಿಗಳಲ್ಲಿ ನಡೆಯಲಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !