ಹಾವೇರಿ: ಜಿಲ್ಲೆಯಲ್ಲಿರುವ ಮಾಜಿ ದೇವದಾಸಿಯರ ಬಗ್ಗೆ ಮಾಹಿತಿ ಕಲೆಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಸಲಾದ ಸಮೀಕ್ಷೆ ಮುಕ್ತಾಯಗೊಂಡಿದೆ. ಸೆಪ್ಟೆಂಬರ್ 15ರಿಂದ ಡಿಸೆಂಬರ್ 31ರ ವರೆಗೆ ನಡೆದ ಸಮೀಕ್ಷೆಯಲ್ಲಿ 460 ಮಾಜಿ ದೇವದಾಸಿಯರ ಮಾಹಿತಿ ಸಂಗ್ರಹಿಸಲಾಗಿದ್ದು, ಇದೇ ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಾಲಕಿಯರು ಹಾಗೂ ಯುವತಿಯರನ್ನು ‘ಮುತ್ತು’ ಕಟ್ಟುವ ಮೂಲಕ ‘ದೇವದಾಸಿ’ ಹೆಸರಿನಲ್ಲಿ ದೇವರ ಜೊತೆ ಮದುವೆ ಮಾಡಿಕೊಡುವ ಪದ್ಧತಿಯಿತ್ತು. ಅದೇ ಬಾಲಕಿ ಹಾಗೂ ಯುವತಿಯರು, ದೈಹಿಕ ಹಾಗೂ ಮಾನಸಿಕ ಶೋಷಣೆಗೆ ಒಳಗಾಗುತ್ತಿದ್ದರು.

ಈ ಅನಿಷ್ಠ ಪದ್ಧತಿಯನ್ನು ನಿಷೇಧಗೊಳಿಸಲು 1982ರಲ್ಲಿ ಕಾಯ್ದೆ ಜಾರಿಗೊಳಿಸಲಾಯಿತು. ಅಂದಿನಿಂದ ದೇವದಾಸಿ ಪದ್ಧತಿ ಕ್ರಮೇಣ ನಿಯಂತ್ರಣಕ್ಕೆ ಬಂತು. ದೇವದಾಸಿಯರ ಸರ್ವಾಂಗೀಣ ಅಭಿವೃದ್ಧಿಗೂ ಸರ್ಕಾರವು ವಸತಿ, ಕೌಶಲ ತರಬೇತಿ ಮತ್ತು ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗಳ ನೈಜ ಫಲಾನುಭವಿ ಆಯ್ಕೆಗಾಗಿ ಈ ಸಮೀಕ್ಷೆ ನಡೆಸಲಾಗುತ್ತಿದೆ.

18 ವರ್ಷಗಳ ಬಳಿಕ ಸಮೀಕ್ಷೆ: ರಾಜ್ಯದಲ್ಲಿರುವ ದೇವದಾಸಿಯರ ಮಾಹಿತಿ ಸಂಗ್ರಹಿಸಲು 1993–94ರಲ್ಲಿ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗಿತ್ತು. ಅದಾದ ಬಳಿಕ 2007–08ರಲ್ಲಿ ಎರಡನೇ ಬಾರಿ ಸಮೀಕ್ಷೆ ನಡೆಸಲಾಗಿತ್ತು. ಇದೀಗ, 18 ವರ್ಷಗಳ ಬಳಿಕ 2025–26ರಲ್ಲಿ ಪುನಃ ಸಮೀಕ್ಷೆ ನಡೆಸಲಾಗಿದೆ.

‘1993–94ರ ಸಮೀಕ್ಷೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ 663 ದೇವದಾಸಿಯರ ಮಾಹಿತಿ ಸಂಗ್ರಹಿಸಲಾಗಿತ್ತು. 2007–08ರಲ್ಲಿ 367 ದೇವದಾಸಿಯರು ಮಾಹಿತಿ ನೀಡಿದ್ದರು. ಈ ಬಾರಿಯ ಸಮೀಕ್ಷೆಯಲ್ಲಿ (2025–26) 460 ದೇವದಾಸಿಯರ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಜಿ ದೇವದಾಸಿಯರನ್ನು ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿಗೆ ಕರೆಯಿಸಿ ದತ್ತಾಂಶ ಸಂಗ್ರಹಿಸಲಾಗಿದೆ. ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಕುಟುಂಬದ ವಿವರ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವ ಮಾಹಿತಿ ಪಡೆಯಲಾಗಿದೆ’ ಎಂದರು.

‘ಮೊದಲ ಸಮೀಕ್ಷೆಯಿಂದ ಇದುವರೆಗೂ ಜಿಲ್ಲೆಯಲ್ಲಿ ಸುಮಾರು 900 ಮಾಜಿ ದೇವದಾಸಿಯರು ಇರುವ ಮಾಹಿತಿಯಿತ್ತು. ಇದರಲ್ಲಿ ಈಗಾಗಲೇ 443 ಮಾಜಿ ದೇವದಾಸಿಯರು ಮರಣ ಹೊಂದಿದ್ದಾರೆ. ಉಳಿದವರ ಪೈಕಿ 460 ಮಂದಿ ಮಾತ್ರ ಈ ವರ್ಷದ ಸಮೀಕ್ಷೆಯಲ್ಲಿ ಮಾಹಿತಿ ನೀಡಿದ್ದಾರೆ. 30 ಮಂದಿ ಆರೋಗ್ಯ ಸಮಸ್ಯೆಯಿಂದಾಗಿ ಮನೆಯಿಂದ ಹೊರಬರಲು ಆಗಿಲ್ಲ. ಅವರ ಮನೆಗೆ ಹೋಗಿ ಸಮೀಕ್ಷೆ ನಡೆಸುವ ಬಗ್ಗೆ ಇಲಾಖೆಯಿಂದ ನಿರ್ದೇಶನ ಬಂದ ನಂತರ ಮುಂದುವರಿಯಲಾಗುವುದು’ ಎಂದರು.

82 ಮಾಜಿ ದೇವದಾಸಿಯರು ವಲಸೆ: ‘ಜಿಲ್ಲೆಯಲ್ಲಿರುವ ಮಾಜಿ ದೇವದಾಸಿಯರು, ಕೆಲಸ ಹಾಗೂ ಇತರೆ ಕಾರಣದಿಂದ ಊರು ಬಿಟ್ಟು ವಲಸೆ ಹೋಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರ ಸಹಾಯದಿಂದ ಈ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ರೇವತಿ ಹೊಸಮಠ ಹೇಳಿದರು.

‘ಮಾಜಿ ದೇವದಾಸಿಯರು ಹಾಗೂ ಅವರ ಅವಲಂಬಿತರು ಎಂದು ಹೇಳಿಕೊಂಡು ನೋಂದಣಿಗಾಗಿ ಹೊಸದಾಗಿ 24 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರು ನೈಜ ಫಲಾನುಭವಿಗಳೇ ? ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಜಿ ದೇವದಾಸಿಯರ ಮಾಹಿತಿ ಆಧರಿಸಿ, ಅರ್ಹರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗುವುದು. ಪ್ರತಿ ತಿಂಗಳು ₹ 2 ಸಾವಿರ ಮಾಸಾಶನ, ಉದ್ಯೋಗ ಹಾಗೂ ಕೆಲಸ ಮಾಡಲು ₹ 30 ಸಾವಿರ ಪ್ರೋತ್ಸಾಹ ಧನ, ನಿವೇಶನವಿದ್ದರೆ ಮನೆ ನಿರ್ಮಾಣಕ್ಕೆ ಮಂಜೂರಾತಿ ಸೇರಿದಂತೆ ಹಲವು ಯೋಜನೆಗಳಿವೆ’ ಎಂದು ಹೇಳಿದರು.

2025ರ ಸೆ. 15ರಿಂದ ಡಿ. 31ರವರೆಗೆ ನಡೆದ ಸಮೀಕ್ಷೆ 443 ಮಾಜಿ ದೇವದಾಸಿಯರು ಮರಣ

‘1982ರ ನಂತರದ ಜನನ ಗೊಂದಲ’

‘1982ರ ನಂತರ ಜನಿಸಿದ ಮಾಜಿ ದೇವದಾಸಿಯರನ್ನು ಸಮೀಕ್ಷೆಯಿಂದ ಹೊರಗೆ ಇರಿಸಲಾಗಿದೆ’ ಎಂದು ಆರೋಪವೂ ಕೇಳಿಬಂದಿದೆ. ‘1982ರ ನಂತರವೂ ಹಲವು ಕಡೆ ದೇವದಾಸಿ ಪದ್ಧತಿಯಿತ್ತು. ಅದರಿಂದ ಹಲವರು ಶೋಷಣೆ ಅನುಭವಿಸಿದ್ದಾರೆ. ಈಗ ಜನರಲ್ಲಿ ಅರಿವು ಹೆಚ್ಚಾಗಿದೆ. ಹೀಗಾಗಿ 1982ರ ನಂತರ ಜನಿಸಿದ ಮಾಜಿ ದೇವದಾಸಿಯರನ್ನು ಸಮೀಕ್ಷೆಗೆ ಪರಿಗಣಿಸಬೇಕು’ ಎಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.