ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಎಲ್‌ಐಸಿ ಕಾಲೊನಿಗೆ ಮೂಲಸೌಕರ್ಯ ಕಲ್ಪಿಸಲು ಕೋರಿಕೆ

ರಸ್ತೆ ಡಾಂಬರೀಕರಣಕ್ಕೆ ಮನವಿ
Last Updated 22 ಜನವರಿ 2022, 14:49 IST
ಅಕ್ಷರ ಗಾತ್ರ

ಹಾವೇರಿ: ನಗರಸಭೆ ವ್ಯಾಪ್ತಿಗೆ ಬರುವ ಇಜಾರಿಲಕಮಾಪುರ 2ನೇ ವಾರ್ಡಿನ ಎಲ್.ಐ.ಸಿ ಕಾಲೊನಿಯಲ್ಲಿ ರಸ್ತೆ ಡಾಂಬರೀಕರಣ ಮತ್ತು ಮೂಲಸೌಕರ್ಯ ಒದಗಿಸಬೇಕು ಎಂದು ಮಂಜುನಾಥ ನಗರ ಸಿ–ಬ್ಲಾಕ್‌ನ ಎಲ್‌ಐಸಿ ಕಾಲೊನಿಯ ಅಭಿಮಾನಿ ದೇವರ ಬಳಗದ ವತಿಯಿಂದ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ನಗರಸಭೆಯಿಂದ ರಸ್ತೆಗಳ ಡಾಂಬರೀಕರಣ ಕಾರ್ಯ ನಡೆದಿಲ್ಲ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸದ ಕಾರಣ ಇಲ್ಲಿನ ಜನರು ನಿತ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದರು.

ಬೀದಿದೀಪಗಳ ದುರಸ್ತಿ, ಕೊಳವೆಬಾವಿ ಸೌಲಭ್ಯ, ಸಮರ್ಪಕ ಚರಂಡಿ, ದೇವಸ್ಥಾನದ ಜಾಗ ಮತ್ತು ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಮನವಿ ಮಾಡಿದರು. ನಳಗಳಿದ್ದರೂ 24x7 ಕುಡಿಯುವ ನೀರಿನ ಸೌಲಭ್ಯವಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ ಎಂದು ಸಮಸ್ಯೆ ತೋಡಿಕೊಂಡರು.

ಜೆ.ಪಿ. ರೋಟರಿ ಶಾಲೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಸ್ಕೂಲ್ ಎದುರಿಗೆ ಇರುವ ನೂತನ ರಸ್ತೆಗಳು, ಸದಾಶಿವನಗರ, ಬನಶಂಕರಿ ನಗರ, ವಿನಾಯಕನಗರಗಳಿಗೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಮಂಜುನಾಥ ನಗರದ ಸಿ–ಬ್ಲಾಕ್‌ನಲ್ಲಿರುವಎಲ್‌ಐಸಿ ಕಾಲೊನಿಗೆ ಸೌಕರ್ಯಗಳನ್ನು ಒದಗಿಸದೇ ತಾರತಮ್ಯ ಮಾಡಲಾಗಿದೆ.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಬಡಾವಣೆಗೆ ಭೇಟಿ ನೀಡಿ, ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಕೋರಿದರು.

ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿಉಪವಾಸ ಸತ್ಯಾಗ್ರಹವನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು, ಸಮಸ್ಯೆಗಳನ್ನು ಹಂತ–ಹಂತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ವಾರ್ಡ್‌ ಸದಸ್ಯ ಜಗದೀಶ ಮಲಗೋಡ, ಅಭಿಮಾನಿ ದೇವರ ಬಳಗದ ಅಧ್ಯಕ್ಷ ಶಿವಾನಂದ ಹೊಸಮನಿ, ಉಪಾಧ್ಯಕ್ಷ ಸೋಮಶೇಖರ ಕರ್ಜಗಿ, ಗೌರವ ಅಧ್ಯಕ್ಷ ಅಶೋಕ ಬಸ್ತಿ, ರಾಘವೇಂದ್ರ ಬಸ್ತಿ, ಸತೀಶ ಕೋರಿಶೆಟ್ಟರ್‌, ಮಾಲತೇಶ ನವಲೆ, ಉಮೇಶ್‌ ಬಳ್ಳಾರಿ, ರಾಮರೆಡ್ಡಿ ಶಿಶುವಿನಹಳ್ಳಿ, ರಾಜೇಂದ್ರ ಚಲ್ಲಾಳ ಇತರ ಸದಸ್ಯರು ಹಾಗೂ ನಿವಾಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT