ಗುರುವಾರ , ಜನವರಿ 23, 2020
26 °C
ರಾಣೆಬೆನ್ನೂರು ಕ್ಷೇತ್ರದಲ್ಲಿ ಶೇ 73.93, ಹಿರೇಕೆರೂರು ಕ್ಷೇತ್ರದಲ್ಲಿ ಶೇ 79.03

ಹಾವೇರಿ: ಜಿಲ್ಲೆಯಲ್ಲಿ ಶೇ 76.48 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲೆಯ ಹಿರೇಕೆರೂರು ಹಾಗೂ ರಾಣೆಬೆನ್ನೂರಿನ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಗುರುವಾರ ನಡೆದ ಮತದಾನದಲ್ಲಿ 4,16,621 ಮತದಾರರ ಪೈಕಿ 3,17,369 ಮತದಾರರು ಮತದಾನ ಮಾಡಿದ್ದಾರೆ. ಅಂದರೆ ಜಿಲ್ಲೆಯಲ್ಲಿ ಒಟ್ಟಾರೆ ಶೇ 76.48 ಮತದಾನವಾಗಿದೆ.  

ಜಿಲ್ಲೆಯ ಪ್ರಮುಖ ‘ವಾಣಿಜ್ಯ ಕೇಂದ್ರ’ ಎನಿಸಿರುವ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 1,18,627 ಪುರುಷರು ಹಾಗೂ 1,14,497 ಮಹಿಳೆಯರು ಹಾಗೂ 13 ಇತರ ಮತದಾರರು ಸೇರಿದಂತೆ 2,33,137 ಮತದಾರರು ಇದ್ದಾರೆ. ಇವರ ಪೈಕಿ 89,129 ಪುರುಷರು, 83,238 ಮಹಿಳೆಯರು ಹಾಗೂ ಇತರೆ ಒಬ್ಬರು ಸೇರಿ 1,72,369 ಜನರು ಮತ ಚಲಾಯಿಸಿದ್ದಾರೆ.

ರಾಣೆಬೆನ್ನೂರಿನಲ್ಲಿ ಒಟ್ಟು ಮತದಾರರ ಪೈಕಿ ಶೇ 75.13 ರಷ್ಟು ಪುರುಷರು ಹಾಗೂ ಶೇ 72.70ರಷ್ಟು ಮಹಿಳೆಯರು ಶೇ 7.69 ರಷ್ಟು ಇತರ ಮತದಾರರು ಸೇರಿದಂತೆ ಶೇ 73.93ರಷ್ಟು ಜನರು ಮತದಾನ ಮಾಡಿದ್ದಾರೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರ: ಈ ಕ್ಷೇತ್ರದಲ್ಲಿ 94,474 ಪುರುಷರು ಹಾಗೂ 89,003 ಮಹಿಳೆಯರು ಹಾಗೂ 4 ಜನ ಇತರ ಮತದಾರರು ಸೇರಿದಂತೆ 1,81,481 ಮತದಾರರು ಇದ್ದಾರೆ. ಇವರ ಪೈಕಿ 75,371 ಪುರುಷರು ಹಾಗೂ 69,630 ಮಹಿಳೆಯರು ಸೇರಿದಂತೆ 1,45,001 ಜನರು ಮತ ಚಲಾಯಿಸಿದ್ದಾರೆ.

ಹಿರೇಕೆರೂರಿನಲ್ಲಿ ಒಟ್ಟು ಮತದಾರರ ಪೈಕಿ ಶೇ 79.73ರಷ್ಟು ಪುರುಷರು ಹಾಗೂ ಶೇ 78.23ರಷ್ಟು ಮಹಿಳೆಯರು ಸೇರಿದಂತೆ ಒಟ್ಟಾರೆ ಶೇ 79.03ರಷ್ಟು ಜನರು ಮತದಾನ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು