ಸೋಮವಾರ, ಸೆಪ್ಟೆಂಬರ್ 26, 2022
22 °C

ಕೋಡಿಬಿದ್ದ ಹೆಗ್ಗೇರಿ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸತತವಾಗಿ ಸುರಿದ ಭಾರಿ ಮಳೆಗೆ ನಗರದ ಐತಿಹಾಸಿಕ ಹೆಗ್ಗೇರಿ ಕೆರೆ ಭರ್ತಿಯಗಿದ್ದು, ಕೋಡಿ ಬಿದ್ದಿದೆ. ತುಂಬಿ ತುಳುಕುತ್ತಿರುವ ಕೆರೆಯ ನೋಟ ನಯನ ಮನೋಹರವಾಗಿದೆ. 

ಹೆಗ್ಗೇರಿ ಕೆರೆ ಅತಿ ದೊಡ್ಡ ಕೆರೆ ಎನ್ನುವ ಖ್ಯಾತಿ ಹೊಂದಿದೆ. ಕಾಗಿನೆಲೆ ಕೆರೆ ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾದ ಕಾರಣಕ್ಕೆ ಕೋಡಿಮೂಲಕ ನೀರು ಹರಿದು ಬರುತ್ತಿದೆ. ಈ ನೀರು ಮತ್ತು ಮಳೆಯ ನೀರು ಒಗ್ಗೂಡಿದ ಪರಿಣಾಮ ಹೆಗ್ಗೇರಿ ಕೆರೆ ಭರ್ತಿಯಾಗಿದೆ. 

ಕೋಡಿಪ್ರದೇಶದ ನೀರು ಹೊಲಗಳಿಗೆ ನುಗ್ಗಿದ್ದು, ಸಾವಿರಾರು ಎಕರೆ ಕೃಷಿ ಬೆಳೆಗಳು ನೀರುಪಾಲಾಗಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೆರೆ ಕಾಲುವೆಯ ಹೂಳು ತೆಗೆಸಬೇಕು ಎಂದು ಆಗ್ರಹಿಸಿದ್ದಾರೆ. 

ಕೆರೆಯ ದಂಡೆಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಕೆರೆ ದಂಡೆಯನ್ನು ಹಾಗೂ ಕೋಡಿ ಪ್ರದೇಶವನ್ನು ಸಣ್ಣ ನೀರಾವರಿ ಇಲಾಖೆ ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ.

ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಕೆರಿಮತ್ತಿಹಳ್ಳಿಯ ಸಮೀಪದ ಪೊಲೀಸ್ ವಸತಿ
ಸಂಕೀರ್ಣ ಜಲಾವೃತವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು