ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಳಿ ಸಾಕಾಣಿಕೆ ಲಾಭದಾಯಕ’

Last Updated 17 ಜುಲೈ 2020, 14:15 IST
ಅಕ್ಷರ ಗಾತ್ರ

ಹಾವೇರಿ: ಅಸಿಲ್ ಕ್ರಾಸ್ ನಾಟಿ ಕೋಳಿ ತಳಿಯು ಗ್ರಾಮೀಣ ಭಾಗದ ಮಹಿಳಾ ಫಲಾನುಭವಿಗಳಿಗೆ ವರದಾನವಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ಮಹಿಳಾ ಫಲಾನುಭವಿಗಳಿಗೆ ಶುಕ್ರವಾರ ಉಚಿತವಾಗಿ ಅಸಿಲ್ ಕ್ರಾಸ್ ನಾಟಿ ಕೋಳಿಮರಿಗಳನ್ನು ಸಾಕಾಣಿಕೆಗೆ ವಿತರಿಸಿ ಮಾತನಾಡಿದರು.

ಗ್ರಾಮೀಣ ಮಹಿಳಾ ಫಲಾನುಭವಿಗಳ ಭಾಗ್ಯಧಾತ ಎಂದೇ ಕರೆಸಿಕೊಳ್ಳುವ ಈ ತಳಿಯ ಕೋಳಿಗಳ ಸಾಕಾಣಿಕೆಗೆ ವಿತರಿಸುವುದು ಉತ್ತಮ ಕಾರ್ಯವಾಗಿದೆ. ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆಗೆ ಈ ಕೋಳಿ ಸಾಕಾಣಿಕೆಯಿಂದ ಅನುಕೂಲವಾಗಿದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪಿ.ಎನ್. ಹುಬ್ಬಳ್ಳಿ ಅವರು, ಅಸಿಲ್ ಕ್ರಾಸ್ ನಾಟಿ ಕೋಳಿ ತಳಿಯು ಮೊಟ್ಟೆ ಉತ್ಪಾದನೆ ಹಾಗೂ ಮಾಂಸದ ಉತ್ಪಾದನೆ ಎರಡಕ್ಕೂ ಕೂಡ ಅರ್ಹ ತಳಿಯಾಗಿದೆ. ಒಂದು ಕೋಳಿಯು ವರ್ಷಕ್ಕೆ ಸರಾಸರಿ 180ರಿಂದ 200 ಮೊಟ್ಟೆಗಳ ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದು 3ರಿಂದ 4 ತಿಂಗಳ ವಯಸ್ಸಿನಲ್ಲಿ ಸುಮಾರು 2ರಿಂದ 3 ಕೆ.ಜಿಯಷ್ಟು ತೂಕವನ್ನು ಹೊಂದುತ್ತದೆ. ಇತರೇ ಕೋಳಿಗಳಿಗಿಂತ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿದೆ. ಗ್ರಾಮೀಣ ಮಹಿಳೆಯರು ಹಿತ್ತಲ ಕೋಳಿಗಳಾಗಿ ಇವುಗಳನ್ನು ಅತೀ ಕಡಿಮೆ ಖರ್ಚಿನಲ್ಲಿ ಸಾಕುವುದರಿಂದ ತುಂಬಾ ಲಾಭದಾಯಕವಾಗಿದೆ ಎಂದು ತಿಳಿಸಿದರು.

ಹಾವೇರಿ ತಾಲ್ಲೂಕಿನ ಕನಕಾಪುರ ಮತ್ತು ಚಿಕ್ಕಲಿಂಗದಹಳ್ಳಿ ಗ್ರಾಮಗಳ 42 ಫಲಾನುಭವಿಗಳಿಗೆ 5 ವಾರದ ತಲಾ 38 ಕೋಳಿ ಮರಿಗಳಂತೆ 1596 ಕೋಳಿ ಮರಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಪಶು ಇಲಾಖೆ ಪಾಲಿಕ್ಲಿನಿಕ್‍ನ ಉಪನಿರ್ದೇಶಕ ಡಾ.ಎಚ್.ಬಿ ಸಣ್ಣಕ್ಕಿ, ಸಹಾಯಕ ನಿರ್ದೇಶಕ ಡಾ.ಬೀರೇಶ ಸಣ್ಣಪುಟ್ಟಕ್ಕನವರ, ಡಾ.ಮಹೇಶ ಸವಣೂರು, ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ಎಫ್ ಕರಿಯಪ್ಪನವರ, ಕನಕಾಪುರದ ಮಾಲತೇಶ ಗಾಜಿ, ಅಶೋಕ ಬಣಕಾರ, ಮಹಿಳಾ ಫಲಾನುಭವಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT