ಮಂಗಳವಾರ, ಡಿಸೆಂಬರ್ 1, 2020
24 °C

ಹಾವೇರಿ: ಸಾಯಿಬಾಬಾ ಜಯಂತಿಗೆ ಬೃಹತ್‌ ಏಲಕ್ಕಿ ಮಾಲೆ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ದೇಶ–ವಿದೇಶಗಳಲ್ಲಿ ಪ್ರಸಿದ್ಧ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆ, ಈ ಬಾರಿ ಪುಟ್ಟಪರ್ತಿಯಲ್ಲೂ ಕಂಪು ಬೀರಲಿದೆ. ನ.23ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಸತ್ಯಸಾಯಿ ಬಾಬಾರವರ 95ನೇ ಜಯಂತಿ ಕಾರ್ಯಕ್ರಮಕ್ಕೆ ಹಾವೇರಿಯಿಂದ ಏಲಕ್ಕಿ ಮಾಲೆಗಳನ್ನು ನೀಡಲಿದ್ದೇವೆ’ ಎಂದು ಸತ್ಯಸಾಯಿ ಸಮಿತಿಯ ಸದಸ್ಯ ಬಾಬಣ್ಣ ಕೋರಿ ತಿಳಿಸಿದ್ದಾರೆ. 

‘ಸಮಿತಿಯಿಂದ ಸುಮಾರು ₹30 ಸಾವಿರ ಮೌಲ್ಯದ 12 ಅಡಿ ಮತ್ತು 6 ಅಡಿ ಎತ್ತರದ ಬೃಹತ್‌ ಏಲಕ್ಕಿ ಹಾರಗಳನ್ನು ತಯಾರಿಸಲಾಗುತ್ತಿದೆ. ಸಮಿತಿಯಿಂದ ಹಾರಗಳಿಗೆ ತಗುಲುವ ಖರ್ಚನ್ನು ಮಾತ್ರ ಭರಿಸಲಾಗಿದೆ. ನಗರದ ಸಿದ್ದೇದೇವಪುರದ ಏಲಕ್ಕಿ ಮಾಲೆ ತಯಾರಕ ಸಂಜೀವಯ್ಯ ಅಂದಾನಿಮಠ ಅವರು ಯಾವುದೇ ಕೂಲಿ ಪಡೆಯದೆ ಉಚಿತವಾಗಿ ಮಾಲೆಗಳನ್ನು ತಯಾರಿಸಿಕೊಡಲು ಸ್ವಪ್ರೇರಣೆಯಿಂದ ಮುಂದಾಗಿದ್ದಾರೆ’ ಎಂದು ಹೇಳಿದ್ದಾರೆ. 

‘ಈ ಬಾರಿ ಸತ್ಯಸಾಯಿ ಬಾಬಾರವರ ಸಮಾಧಿಗೆ ಏಲಕ್ಕಿ ಹಾರಗಳನ್ನು ಸಮರ್ಪಿಸಲು ಸಮಿತಿಗೆ ಅವಕಾಶ ಸಿಕ್ಕಿರುವುದು ಹಾಗೂ ಭಕ್ತರ ಸಹಕಾರ ದೊರೆತಿರುವುದು ಎಲ್ಲವೂ ಬಾಬಾನ ಕೃಪೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು