60 ಬೆಡ್‌ಗಳ ಐಸಿಯು ಅಗತ್ಯ
ಹಾವೇರಿ ಜಿಲ್ಲಾಸ್ಪತ್ರೆಯ ಶಿಶುಗಳ ಆರೈಕೆ ವಿಭಾಗದಲ್ಲಿ 10 ಬೆಡ್‌ಗಳು ಮಾತ್ರ ಇವೆ. ಉಳಿದಂತೆ, ಎಲ್ಲಿಯೂ ಆರೈಕೆ ವಿಭಾಗಗಳಿಲ್ಲ. ಕೆಲ ಖಾಸಗಿ ಆಸ್ಪತ್ರೆಯಲ್ಲಿ ಘಟಕಗಳಿದ್ದು, ಅವುಗಳು ಪರಿಣಾಮಕಾರಿಯಾಗಿಲ್ಲವೆಂದು ಜನರು ದೂರುತ್ತಿದ್ದಾರೆ. ‘ಮಗು ಜನಿಸುತ್ತಿದ್ದಂತೆ, ಅದಕ್ಕಿರುವ ಆರೋಗ್ಯ ಸಮಸ್ಯೆಯನ್ನು ತ್ವರಿತವಾಗಿ ಪತ್ತೆ ಮಾಡಬೇಕು. ಅದಕ್ಕೆ ತಕ್ಕಂತೆ ತ್ವರಿತ ಚಿಕಿತ್ಸೆ ನೀಡಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಐಸಿಯು ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ರಾಜೇಶ್ ಸುರಗಿಹಳ್ಳಿ, ‘ಜಿಲ್ಲೆಯಲ್ಲಿ ಶಿಶುಗಳ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಿಶುಗಳ ಆರೈಕೆಗೆಂದು 60 ಬೆಡ್‌ಗಳ ಪ್ರತ್ಯೇಕ ಐಸಿಯು ಅಗತ್ಯವಿದೆ’ ಎಂದು ಹೇಳಿದರು.
‘ಕೆಲ ಆಸ್ಪತ್ರೆಯವರು, ಹೆರಿಗೆ ಬಳಿಕ ಶಿಶುಗಳನ್ನು ಏಕಾಏಕಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾರೆ. ಕಡಿಮೆ ಆರೋಗ್ಯ ಸಮಸ್ಯೆ ಇರುವ ಶಿಶುಗಳು ಬದುಕುತ್ತಿವೆ. ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಶಿಶುಗಳ ಪ್ರಾಣಕ್ಕೆ ಅಪಾಯ ಉಂಟಾಗುತ್ತಿದೆ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದರು.