ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಕೇಂದ್ರ ಸ್ಥಾನದ ಹಾಗೂ ಪ್ರಾದೇಶಿಕ ಜಾನಪದ ಅಧ್ಯಯನ ಕೇಂದ್ರಗಳಲ್ಲಿನ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‍ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಯುಜಿಸಿ ಅಂಗೀಕೃತ ಯಾವುದೇ ವಿಶ್ವವಿದ್ಯಾಲಯದ ಪದವಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಫಲಿತಾಂಶ ಪ್ರಕಟಣೆಯ ನಂತರ ಅಂಕಪಟ್ಟಿಗಳನ್ನು ಕೂಡಲೇ ಇಂಟರ್‌ನೆಟ್ ಮೂಲಕ ಪಡೆದು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಎಂ.ಎ ಕೋರ್ಸ್‍ಗಳು:

ಎಂ.ಎ ಕೋರ್ಸಗಳಾದ ಜಾನಪದ ವಿಜ್ಞಾನ, ಜನಪದ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜನಪದ ಕಲೆ, ಕನ್ನಡ- ಜಾನಪದ, ಪ್ರವಾಸೋದ್ಯಮ, ಬುಡಕಟ್ಟು ಅಧ್ಯಯನ, ಗ್ರಾಮೀಣ- ಬುಡಕಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಹಿಳಾ ಅಧ್ಯಯನ, ಇಂಗ್ಲಿಷ್ (ಜಾನಪದ & ಅನುವಾದ ಅನುಲಕ್ಷಿಸಿ) ಅರ್ಥಶಾಸ್ತ್ರ(ಗ್ರಾಮೀಣ), ಸಮಾಜಶಾಸ್ತ್ರ(ಗ್ರಾಮೀಣ) ಎಂ.ಬಿ.ಎ ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ, ಪ್ರವಾಸೋದ್ಯಮ & ಪ್ರವಾಸೋದ್ಯಮ ನಿರ್ವಹಣೆ, ಎಂ.ಎಸ್ಸಿ ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಎಂ.ಪಿ.ಎ ಪ್ರದರ್ಶನ ಕಲೆ, ಎಂ.ವಿ.ಎ ದೃಶ್ಯ ಕಲೆ, ಎಂ.ಎಸ್.ಡಬ್ಲ್ಯೂ ಸಮಾಜ ಕಾರ್ಯ (ಜನಪದ & ಬುಡಕಟ್ಟು ಅಭಿವೃದ್ಧಿ ಅನುಲಕ್ಷಿಸಿ) ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ಕೋರ್ಸ್‍ಗಳು:

ಸಮರ ಕಲೆ, ಜನಪದ ಗೀತ ಸಂಪ್ರದಾಯ, ಕಸೂತಿ ಕಲೆ, ಜನಪದ ನೃತ್ಯ, ದೊಡ್ಡಾಟ, ಪ್ರವಾಸೋದ್ಯಮ, ತೊಗಲು ಗೊಂಬೆಯಾಟ, ಬಿದರಿ ಕಲೆ, ಬೀಸು ಕಂಸಾಳೆ ಮತ್ತು ಡೊಳ್ಳು ಕುಣಿತ ಸೇರಿದಂತೆ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳಾದ ಜನಪದ ಮಹಾಕಾವ್ಯ, ಪಾರಂಪರಿಕ ಹೈನುಗಾರಿಕೆ, ಪಾರಂಪರಿಕ ತೋಟಗಾರಿಕೆ ಹಾಗೂ ಡಿಪ್ಲೊಮಾ ಕೋರ್ಸ್‍ಗಳಾದ ಜಾನಪದ ಬಯಲಾಟ (ಮೂಡಲಪಾಯ), ಯಕ್ಷಗಾನ ಬಯಲಾಟ, ಪಾರಂಪರಿಕ ಸೌಂದರ್ಯ ಶಾಸ್ತ್ರ, ಹಚ್ಚೆ, ಪಾರಂಪರಿಕ ಸಮರ ಕಲೆ, ಯೋಗ ಕೋರ್ಸಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ, ಅರ್ಜಿ ನಮೂನೆ, ಪ್ರವೇಶ ಶುಲ್ಕ ಹಾಗೂ ಇತರ ಮಾಹಿತಿಗಳನ್ನು ವಿಶ್ವವಿದ್ಯಾಲಯದ ವಿವರಣಾ ಪುಸ್ತಕದಿಂದ ಪಡೆಯಬಹುದು ಅಥವಾ ವಿಶ್ವವಿದ್ಯಾಲಯದ ವೆಬ್‍ಸೈಟ್ http://www.janapadauniversity.ac.in ಸಂಪರ್ಕಿಸಬಹುದಾಗಿದೆ. ಮಾಹಿತಿಗಾಗಿ ದೂ:6366266465, 9449233966 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.