ಬ್ಯಾಡಗಿ: ಆಹಾರ ಪದ್ಧತಿ ಮತ್ತು ಹೆಪಟೈಟಿಸ್ (ಕಾಮಾಲೆ) ರೋಗ ಲಕ್ಷಣಗಳ ಕುರಿತು ಮಾಹಿತಿ ಕೊರತೆಯಿಂದ ಕಾಮಾಲೆ ರೋಗವು ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಪುಟ್ಟರಾಜು ಹೇಳಿದರು.
ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ವಿಶ್ವ ಹೆಪಟೈಟಿಸ್-ಬಿ ದಿನಾಚರಣೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಟ್ಟಿದ ಮಕ್ಕಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ ಉಳಿದವರಿಗೆ ಹಣ ಪಡೆದು ಲಸಿಕೆ ಹಾಕುವ ವ್ಯವಸ್ಥೆ ಇದೆ. ಈ ಮೊದಲು ಲಸಿಕೆ ತುಂಬಾ ದುಬಾರಿ ಹಾಗೂ ವಿರಳವಾಗಿತ್ತು. ಸರ್ಕಾರ ಈಗ ಅನುಕೂಲತೆ ಕಲ್ಪಿಸಿದ್ದು ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಡಾ.ಚೇತನ ಮಾತನಾಡಿದರು. ಈ ವೇಳೆ ಡಾ.ಹೋತಗಿಗೌಡ್ರ ಹಾಗೂ ಸಿಬ್ಬಂದಿ ಇದ್ದರು.