ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುತ್ಥಳಿ ಅನಾವರಣಕ್ಕೆ ಕ್ರಮ ಕೈಗೊಳ್ಳಿ’

Last Updated 23 ಸೆಪ್ಟೆಂಬರ್ 2021, 15:13 IST
ಅಕ್ಷರ ಗಾತ್ರ

ಹಾವೇರಿ:ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಶರಣರ, ಸಾಹಿತಿಗಳ ವೃತ್ತಗಳನ್ನು ನಿರ್ಮಿಸಿದ್ದು, ಪುತ್ಥಳಿಗಳನ್ನು ಸಮರ್ಪಕವಾಗಿ ಅನಾವರಣಗೊಳಿಸದ ಕಾರಣ ನಗರದ ವೈಭವಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಮುಖಂಡರು ಒತ್ತಾಯಿಸಿದರು.

ನಗರದ ತಹಶೀಲ್ದಾರ್‌ ಕಚೇರಿಗೆ ಜೆಡಿಎಸ್‌ ವತಿಯಿಂದ ಗುರುವಾಗ ಮನವಿ ಪತ್ರ ಸಲ್ಲಿಸಲಾಯಿತು.ನಗರದ ಪಿ.ಬಿ.ರಸ್ತೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮನ ಪುತ್ಥಳಿಯನ್ನು ನಿರ್ಮಿಸುವ ಕೆಲಸ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಕೂಡಲೇ ವೃತ್ತವನ್ನು ಇನ್ನಷ್ಟು ವಿಸ್ತರಿಸಿ, ಚನ್ನಮ್ಮನ ಪುತ್ಥಳಿಯನ್ನು ಅನಾವರಣಗೊಳಿಸಬೇಕು ಎಂದು ಆಗ್ರಹಿಸಿದರು.

ಧಾರವಾಡ ಜಿಲ್ಲೆಯಿಂದ ಪ್ರತ್ಯೇಕಗೊಳಿಸಿ, ಹಾವೇರಿ ಹೊಸ ಜಿಲ್ಲೆಯನ್ನು ಘೋಷಿಸಿದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ ಅವರ ಪುತ್ಥಳಿಯನ್ನು ಜೆ.ಎಚ್‌.ಪಟೇಲ್‌ ವೃತ್ತದಲ್ಲಿ ಸ್ಥಾಪಿಸಲಾಗಿತ್ತು. ತಾಂತ್ರಿಕ ದೋಷದಿಂದ ಪುತ್ಥಳಿಯನ್ನು ತೆರವುಗೊಳಿಸಿದ್ದು, ಇದುವರೆಗೂ ಪುನರ್‌ ಪ್ರತಿಷ್ಠಾಪನೆ ಮಾಡಿಲ್ಲ.ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸಣ್ಣ ಪ್ರಮಾಣದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿ ಇದೆ. ದೊಡ್ಡ ಪ್ರಮಾಣದ ಕಂಚಿನ ಪುತ್ತಳಿಯನ್ನು ನಿರ್ಮಿಸಬೇಕು. ನಗರದ ಪಿಡಬ್ಲ್ಯೂಡಿ ಕ್ವಾಟ್ರಸ್‌ ಹತ್ತಿರದಲ್ಲಿರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ಶೀಘ್ರ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಮುಖಂಡರಾದಕೆ.ಎಂ. ಸುಂಕದ, ಸುನೀಲ ದಂಡೆಮ್ಮನವರ, ಮಹಾಂತೇಶ ಬೇವಿನಹಿಂಡಿ, ರಾಜು ತರ್ಲಘಟ್ಟ, ಅಮೀರ ಜಾನಬೇಪಾರಿ, ಸುರೇಂದ್ರ ಮೋಟೆಬೆನ್ನೂರ, ಸೈಯದ ಜಮಾದಾರ, ಎಚ್.ಮಂತಗಿ, ಎಚ್.ರಾಮಾಪುರ, ಕೆ. ಹುಲಗೂರ, ಜಬೀವುಲ್ಲಾ ಪಠಾಣ, ಶೇಖಪ್ಪ ಹಲಸೂರ, ಹನುಮಂತಪ್ಪ ಲಮಾಣಿ, ಐ.ಹುಬ್ಬಳ್ಳಿ , ಶಿವಪುತ್ರಪ್ಪ ಬಣಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT