ಬುಧವಾರ, ನವೆಂಬರ್ 25, 2020
18 °C
‘ವ್ಯಾದಿ ಬೂದಿ ಆದೀತಲೆ, ಸೃಷ್ಟಿ ಸಿರಿ ಆದೀತಲೆ ಪರಾಕ್‌’

ರಾಣೆಬೆನ್ನೂರು: ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಶನಿವಾರ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯಿತು. 

ಕಾರ್ಣಿಕ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ಬಿಲ್ಲನ್ನು ಏರಿ ಆಕಾಶದತ್ತ ಮುಖ ಮಾಡಿ, ‘ವ್ಯಾದಿ ಬೂದಿ ಆದೀತಲೆ, ಸೃಷ್ಟಿ ಸಿರಿ ಆದೀತಲೆ ಪರಾಕ್’‌ ಎಂದು ಭವಿಷ್ಯ ನುಡಿದರು.

‘ವ್ಯಾಧಿ ಎಂದರೆ ಸಾಂಕ್ರಾಮಿಕ ರೋಗವಾದ ಕೊರೊನಾ ಸೋಂಕು ಸೇರಿದಂತೆ ರೋಗ ರುಜಿನಗಳು ಬೂದಿಯಾಗಲಿವೆ. ಸೃಷ್ಟಿ ಸಿರಿಯಾದೀತಲೆ ಎಂದರೆ ಲೋಕ, ಭೂಮಿ, ಪರಿಸರ, ರಾಜ್ಯ, ರಾಷ್ಟ್ರ ಆರ್ಥಿಕವಾಗಿ ಸಂಪದ್ಭರಿತವಾಗಲಿದೆ ಎಂದರ್ಥ’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಚ್‌. ಮುಕ್ಕಣ್ಣನವರ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು