ಮಂಗಳವಾರ, ಜನವರಿ 26, 2021
24 °C
ಕಾಂಗ್ರೆಸ್‌ ಮುಖಂಡ ಕೋಳಿವಾಡ ಟೀಕೆ

ಎಚ್‌ಡಿಕೆ ಪರಿಪಕ್ವ ರಾಜಕಾರಣಿಯಲ್ಲ: ಕಾಂಗ್ರೆಸ್‌ ಮುಖಂಡ ಕೋಳಿವಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳನ್ನು‌ ಕೇಳಿದರೆ ಅವರು ಪರಿಪಕ್ವ ರಾಜಕಾರಣಿಯಲ್ಲ, ಇನ್ನೂ ಹುಡುಗುತನದ ಬುದ್ಧಿ ಇದೆ ಅನಿಸುತ್ತದೆ’ ಎಂದು ಕಾಂಗ್ರೆಸ್‌ ಧುರೀಣ ಕೆ.ಬಿ.ಕೋಳಿವಾಡ ಟೀಕಿಸಿದರು. 

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು 20–20 ಸರ್ಕಾರ ರಚನೆ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ತಮ್ಮ ಅವಧಿಯ ನಂತರ ಬಿ.ಎಸ್‌. ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದೆ ಪಟ್ಟು ಹಿಡಿದರು. ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುವ ಕುಮಾರಸ್ವಾಮಿ ಹೇಳಿಕೆ ಸಮಂಜಸವಲ್ಲ ಎಂದು ತಿರುಗೇಟು ನೀಡಿದರು. 

ಯಾರದೋ ಹೆಗಲ ಮೇಲೆ ಕುಳಿತು ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಎಂದು ಸ್ವಂತ ಶಕ್ತಿಯಿಂದ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರಿಂದ ಕಣ್ಣೀರು ಹಾಕಿದ್ದೀನಿ ಎಂಬ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ಅವರೊಬ್ಬ ‘ಹಿಟ್‌ ಅಂಡ್‌ ರನ್’‌ ಮನುಷ್ಯ ಎಂದು ಆರೋಪಿಸಿದರು. 

‘ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ನಮ್ಮ (ಕಾಂಗ್ರೆಸ್) ತಪ್ಪು ಎಂದು ಹರಿಹಾಯ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು