ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆ: ಬೆಳೆ ಕಟಾವಿಗೆ ಯಂತ್ರಗಳ ಮೊರೆ

Published : 19 ಸೆಪ್ಟೆಂಬರ್ 2024, 5:21 IST
Last Updated : 19 ಸೆಪ್ಟೆಂಬರ್ 2024, 5:21 IST
ಫಾಲೋ ಮಾಡಿ
Comments
ಬೀರೇಶ ಬೀರಾಳ
ಬೀರೇಶ ಬೀರಾಳ
ಅಶೋಕ ಮೇಗಿಲಮನಿ
ಅಶೋಕ ಮೇಗಿಲಮನಿ
ಯಂತ್ರದಿಂದ ಕಟಾವು ಮಾಡಿಸಿದರೆ ಹಣ ಹಾಗೂ ಸಮಯ ಎರಡೂ ಉಳಿಯುತ್ತದೆ. ಯಂತ್ರದಿಂದ ಬರುವ ಕಾಳುಗಳನ್ನು ಒಣಗಿಸಿ ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದು ಮಾರಬಹುದು
ಅಶೋಕ ಮೇಗಿಲಮನಿ ರೈತ ದೇವಗಿರಿ
ಯಂತ್ರ ಬಳಕೆಗೆ ರೈತರ ಸರದಿ
ಜಿಲ್ಲೆಯ ಬಹುತೇಕ ಕಡೆ ಬೆಳೆಗಳು ಕಟಾವು ಹಂತಕ್ಕೆ ಬಂದಿರುವುದರಿಂದ ಕಟಾವು ಯಂತ್ರಕ್ಕೆ ಬೇಡಿಕೆ ಬಂದಿದೆ. ರೈತರು ತಮ್ಮ ಬೆಳೆ ಕಟಾವು ಮಾಡಿಸಲು ಯಂತ್ರಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ಯಂತ್ರದ ಮಾಲೀಕರು ಹಾಗೂ ಸಿಬ್ಬಂದಿ ಸರದಿ ಪ್ರಕಾರ ರೈತರ ಜಮೀನಿಗೆ ಹೋಗಿ ಕಟಾವು ಮಾಡುತ್ತಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಹಲವು ರೈತರು ಯಂತ್ರ ಬಳಸುತ್ತಿದ್ದಾರೆ. ತಮಗೆ ಯಂತ್ರ ಬೇಕೆಂದು ಬೇಡಿಕೆ ಇರಿಸುತ್ತಿದ್ದಾರೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ ಕಟಾವು ಕೆಲಸ ಹೆಚ್ಚಿದೆ. ಮೊದಲ ಬಂದವರಿಗೆ ಮೊದಲ ಆದ್ಯತೆ ರೀತಿಯಲ್ಲಿ ಬೆಳೆ ಕಟಾವು ಮಾಡುತ್ತಿದ್ದೇವೆ’ ಎಂದು ಯಂತ್ರದ ಆಪರೇಟರ್ ಬೀರೇಶ ಬಿರಾಳ ತಿಳಿಸಿದರು.
ಕೃಷಿ ಕೆಲಸಕ್ಕಿಲ್ಲ ಜನ
ಕೆಲ ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಅಗತ್ಯತೆ ಇತ್ತು. ಹಳ್ಳಿಯಲ್ಲಿದ್ದ ಬಹುತೇಕ ಜನರು, ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಈಗ ಕೃಷಿ ಕೆಲಸ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೆಲವರು, ಗ್ರಾಮ ತೊರೆದು ನಗರದಲ್ಲಿರುವ ಕಾರ್ಖಾನೆ ಸೇರುತ್ತಿದ್ದಾರೆ. ಇದರಿಂದಾಗಿ ಗ್ರಾಮಗಳಲ್ಲಿ ಕೃಷಿ ಕೆಲಸ ಮಾಡಲು ಜನರು ಸಿಗುತ್ತಿಲ್ಲ. ‘ನಾಲ್ಕು ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದೇನೆ. ಕೆಲ ವರ್ಷಗಳ ಹಿಂದೆ, ಕಾರ್ಮಿಕರನ್ನು ಬಳಸಿಕೊಂಡು ಕಟಾವು ಮಾಡಿಸುತ್ತಿದ್ದೆ. ಆದರೆ, ಈಗ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ, ಯಂತ್ರ ಬಳಸಿ ಕಟಾವು ಮಾಡಿಸುತ್ತಿದ್ದೇವೆ’ ಎಂದು ಕುರುಬರಮಲ್ಲೂರಿನ ರೈತ ರಾಮಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT