ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಪ್ರಕರಣ: ಬೆದರಿಕೆ ಹಾಕಿದ್ದ ಯುವತಿಯ ಕುಟುಂಬಸ್ಥರು– ಆರೋಪ

ಒಂದೇ ಮನೆಯಲ್ಲಿ ಮೂವರು ಆತ್ಮಹತ್ಯೆ
Last Updated 22 ಡಿಸೆಂಬರ್ 2022, 14:34 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಗುರುವಾರ ನಡೆದಿದೆ.

ತಾಯಿ ಲಲಿತಾ ಕಮಡೊಳ್ಳಿ (45), ಪುತ್ರ ಕಿರಣ ಕಮಡೊಳ್ಳಿ (26), ಸೊಸೆ ಸೌಜನ್ಯಾ ಕಮಡೊಳ್ಳಿ (20) ಆತ್ಮಹತ್ಯೆ ಮಾಡಿಕೊಂಡವರು. ಕಿರಣ ಮತ್ತು ಸೌಜನ್ಯ ಅವರಿಗೆ ಮೂರು ತಿಂಗಳ ಹಿಂದೆ ವಿವಾಹವಾಗಿತ್ತು ಎನ್ನಲಾಗಿದೆ.

ಈ ಮೂವರ ಆತ್ಮಹತ್ಯೆಗೆ ನಾಗರಾಜ ಪಟ್ಟಣಶೆಟ್ಟಿ, ದರ್ಶನ್‌ ಪಟ್ಟಣಶೆಟ್ಟಿ, ಪ್ರಕಾಶ್‌ ಪಟ್ಟಣಶೆಟ್ಟಿ, ಶಶಿಧರ್‌ ಪಟ್ಟಣಶೆಟ್ಟಿ, ಸಚಿನ್‌ ನಂದಿಕೊಂಡನವರ್‌ ಹಾಗೂ ಪರಮೇಶಪ್ಪ ಅವರು ಕಾರಣಾಗಿದ್ದಾರೆ ಎಂದು ಮೃತ ಲಲಿತಾ ಕಮಡೊಳ್ಳಿ ಅವರ ಪತಿ ವಿರೂಪಾಕ್ಷಪ್ಪ ಕಮಡೊಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿರೂಪಾಕ್ಷಪ್ಪಅವರ ಕಿರಿಯ ಪುತ್ರ ಅರುಣ ಎಂಬಾತ ಅಗಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಡಿ.19ರಂದು ಯುವತಿಯನ್ನು ಹರಿಹರಕ್ಕೆ ಕರೆದೊಯ್ದು ಮದುವೆ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿಯ ಮನೆಯವರು ಕುಪಿತರಾಗಿ, ಅರುಣ ಮತ್ತು ಯುವತಿ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿ, ಅರುಣ ಅವರ ತಾಯಿ, ಅಣ್ಣ ಕಿರಣಮತ್ತು ಅತ್ತಿಗೆ ಸೌಜನ್ಯಾರನ್ನು ಕಾರಿನಲ್ಲಿ ಕರೆದೊಯ್ದು ಎರಡು ದಿನ ಅಕ್ರಮ ಬಂಧನಲ್ಲಿರಿಸಿದ್ದರು.

ನಂತರ ಅವರನ್ನು ಅಗಡಿ ಗ್ರಾಮಕ್ಕೆ ಕರೆತಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರಿಗೆ ದೂರು ಕೊಟ್ಟು ನಿಮ್ಮನ್ನು ಅರೆಸ್ಟ್‌ ಮಾಡಿಸುತ್ತೇವೆ. ನಿಮ್ಮ ಮರ್ಯಾದೆ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಅರುಣನ ಕುಟುಂಬದವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT