ಭಾನುವಾರ, ಮೇ 9, 2021
25 °C

ನದಿಯಲ್ಲಿ ಕೊಚ್ಚಿಹೋದ ಯುವಕನ ರಕ್ಷಣೆಗೆ ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಎತ್ತಿನ ಮೈ ತೊಳೆಯುವಾಗ ಪ್ರಶಾಂತ್ ಸೋಮಪ್ಪ ಕೊಂಚಿಗೇರಿ (18) ಎಂಬ ಯುವಕ ವರದಾ ನದಿಯಲ್ಲಿ ಕೊಚ್ಚಿ ಹೋಗಿದ್ದು, ಆತನ ರಕ್ಷಣೆಗೆ ಮುಂದಾದ ಪರಮೇಶಪ್ಪ ಕಮ್ಮಾರ (62) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

‌ಹಾವೇರಿ ಜಿಲ್ಲೆಯ ಹಂದಿಗನೂರು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಪ್ರಶಾಂತ್ ಎತ್ತುಗಳನ್ನು ತೊಳೆಯಲು 7.30ರ ಸುಮಾರಿಗೆ ನದಿ ಬಳಿ ತೆರಳಿದ್ದ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಆತನನ್ನು, ಎತ್ತುಗಳನ್ನು ತೊಳೆಯುತ್ತಿದ್ದ ಪರಮೇಶಪ್ಪ ಹಿಡಿದುಕೊಳ್ಳಲು ಮುಂದಾಗಿ ಅವರೂ ಅಪಾಯಕ್ಕೆ ಸಿಲುಕಿದರು.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ಪ್ರಾರಂಭಿಸಿದ್ದು, 10.30ರ ಸುಮಾರಿಗೆ ಪರಮೇಶಪ್ಪ ಅವರ ದೇಹವನ್ನು ಹೊರತೆಗೆದಿದ್ದಾರೆ. ಪ್ರಶಾಂತ್‌ಗಾಗಿ ಶೋಧ ಮುಂದುವರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು