ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮಕ್ಕಳನ್ನು ಮನೆಯಲ್ಲಿ ಬಂಧಿಸಿದ್ದ ತಾಯಿ

ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ರಕ್ಷಣೆ
Last Updated 5 ಡಿಸೆಂಬರ್ 2021, 23:10 IST
ಅಕ್ಷರ ಗಾತ್ರ

ಸವಣೂರ (ಹಾವೇರಿ ಜಿಲ್ಲೆ): ಹೆತ್ತ ತಾಯಿ ತನ್ನ ಐದು ವರ್ಷದ ಮಗಳನ್ನು ಹಾಗೂ ಮೂರು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿದ್ದರು. ಸ್ಥಳೀಯರ ದೂರಿನ ಮೇರೆಗೆ ಮಕ್ಕಳ ರಕ್ಷಣಾ ಇಲಾಖೆಯವರು ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ.

ಮಂಗಳವಾರ ಪೇಟೆಯ ನಿವಾಸಿ ಶಾರದಾ ಕಮ್ಮಾರ ಎಂಬುವವರು ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮನೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದರು. ಮಕ್ಕಳು ಅಳುವುದನ್ನು ಕೇಳಲಾಗದೆ ಸ್ಥಳೀಯರು ಶನಿವಾರ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಂಡದವರು ಮನೆಯಲ್ಲಿ ಕೂಡಿ ಹಾಕಿದ್ದ ಮಕ್ಕಳ ಮನವೊಲಿಸಿ ಕಿಟಕಿ ಬಾಗಿಲನ್ನು ತೆರೆಸಿ ಮಾತನಾಡಿಸಿದ್ದಾರೆ.

ಹೆಣ್ಣು ಮಗು ಮಾತನಾಡಿ, ‘ಅಪ್ಪಾಜಿ ನಮ್ಮ ಜೊತೆ ಇರುವುದಿಲ್ಲ. ಅಮ್ಮ ಮತ್ತು ಮನೆಯಲ್ಲಿ ಇರುವ ಅಂಕಲ್ ಹೊಡೆಯುತ್ತಾರೆ. ತಮ್ಮನನ್ನು ಹಾಗೂ ನನ್ನನ್ನು ಮನೆಯಲ್ಲಿ ಕೂಡಿ ಹಾಕಿ ಹೋಗುತ್ತಾರೆ. ಈ ಕುರಿತು ಯಾರಿಗಾದರೂ ಹೇಳಿದರೆ ಮತ್ತಷ್ಟು ಹಿಂಸೆ ಕೊಡುತ್ತಾರೆ’ ಎಂದು ಮಗು ಅಳುತ್ತಾ ಕಿಟಕಿ ಬಾಗಿಲು ಮುಚ್ಚಿದೆ.‌

ಮಕ್ಕಳ ತಾಯಿ ಶಾರದಾ ಅವರಿಗೆ ಅಧಿಕಾರಿಗಳು ಕರೆ ಮಾಡಿ ವಿಚಾರಿಸಿದರೆ, ಹಾರಿಕೆ ಉತ್ತರ ನೀಡಲು ಯತ್ನಿಸಿದರು. ತಕ್ಷಣ ಎಎಸ್ಐ ಗೀತಾ ತಿರುಮಲೆ ಅವರು ತಕ್ಷಣ ಸ್ಥಳಕ್ಕೆ ಬರಲು ಸೂಚಿಸಿದರು. ಮಕ್ಕಳನ್ನು ಹಾವೇರಿ ಜಿಲ್ಲಾ ಸ್ಪಂದನಾ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಕರೆದುಕೊಂಡು ಹೋದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಜಿಲ್ಲಾ ಮಕ್ಕಳ ದತ್ತು ಸ್ವೀಕಾರ ಕೇಂದ್ರ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT