ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಪಂಚಮಿ: ಗರ್ಭಗುಡಿಯಲ್ಲಿ ಪ್ರತ್ಯಕ್ಷವಾದ ನಾಗರಹಾವು!

Last Updated 1 ಆಗಸ್ಟ್ 2022, 16:41 IST
ಅಕ್ಷರ ಗಾತ್ರ

ಹಾವೇರಿ: ನಗರದ ಪುರಸಿದ್ಧೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಸೋಮವಾರ ನಾಗಪಂಚಮಿ ದಿನದಂದು ನಿಜವಾದ ನಾಗರ ಹಾವು ಭಕ್ತರಿಗೆ ದರ್ಶನ ನೀಡಿದೆ.

ಬೆಳಿಗ್ಗೆ ಪುರಸಿದ್ಧೇಶ್ವರ ದೇವರಿಗೆ ಪೂಜೆ ಸಲ್ಲಿಸಲೆಂದು ಬಂದಿರುವ ಭಕ್ತ ಸಮೂಹಕ್ಕೆ ಶಿವಲಿಂಗದ ಮೇಲೆ ನಾಗರ ಹಾವು ಎಡೆ ಬಿಚ್ಚಿ ನಿಂತಿರುವುದು ಕಾಣಿಸಿತು. ಭಕ್ತರು ಭಾವಪರವಶರಾಗಿ ನಮಸ್ಕರಿಸುತ್ತಾ, ದೀರ್ಘದಂಡ ನಮಸ್ಕಾರ ಹಾಕಿದರು. ಈ ಸುದ್ದಿ ಭಕ್ತರಿಂದ ಭಕ್ತರಿಗೆ ತಿಳಿಯುತ್ತಿದಂತೆ ತಂಡ ತಂಡವಾಗಿ ಭಕ್ತರು ದೇವಸ್ಥಾನಕ್ಕೆ ಬಂದರು.

ನಾಗಪಂಚಮಿ ದಿನದಂದೇ ನಾಗದೇವರು ಪ್ರತ್ಯಕ್ಷವಾಗಿ ಭಕ್ತರಿಗೆ ಆಶೀರ್ವಾದ ಮಾಡಿದ್ದಾನೆ. ದರ್ಶನ ಪಡೆದ ಭಕ್ತರಿಗೆ ಒಳಿತಾಗುತ್ತದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದರು. ಮಕ್ಕಳು, ಮಹಿಳೆಯರು ಭಕ್ತಿಯಿಂದ ನಮಸ್ಕರಿಸಿ, ಬೇಡಿಕೆ ಈಡೇರಿಸುವಂತೆ ಬೇಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT