ಬುಧವಾರ, ಏಪ್ರಿಲ್ 14, 2021
31 °C
ಸ್ವಧಾರಾ ಕೇಂದ್ರದಲ್ಲಿ ನಾಮಕರಣ ಸಂಭ್ರಮ

ಸವಾಲು ಎದುರಿಸಲು ಆತ್ಮಬಲ ಅಗತ್ಯ: ಸಿಇಒ ರೋಶನ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಓದಿನೊಂದಿಗೆ ಆತ್ಮವಿಶ್ವಾಸವಿದ್ದರೆ ಎಂತಹ ಕಷ್ಟಗಳನ್ನಾದರೂ ಎದುರಿಸಿ ಗೆಲ್ಲಬಹುದು. ಆತ್ಮಬಲ ಎಂಬುದು ಮಹಿಳೆಗೆ ಎಲ್ಲಕ್ಕಿಂತ ದೊಡ್ಡದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ನುಡಿದರು.

ಇಲ್ಲಿಯ ಶಿವಾಜಿ ನಗರದಲ್ಲಿರುವ ಧ್ವನಿ ಸ್ವಧಾರಾ ಮಹಿಳಾ ವಸತಿ ಕೇಂದ್ರದಲ್ಲಿಯ ಸಂತ್ರಸ್ತೆಯೊಬ್ಬರ ಮಗುವಿಗೆ ‘ಆದ್ಯಾ’ ಎಂದು ನಾಮಕರಣ ಮಾಡಿ ಅವರು ಮಾತನಾಡಿದರು. ‘ಆದ್ಯಾ’ ಎಂದರೆ ದುರ್ಗಿ, ದುರ್ಗಾದೇವಿ ಎಂದರ್ಥ. ಈ ಮಗು ಎಲ್ಲವನ್ನು ಎದುರಿಸಿ ಗೆಲ್ಲಲಿ ಎಂದು ಹಾರೈಸಿದರು.

ಸಿಇಒ ರೋಶನ್‌ ಅವರ ಪತ್ನಿ, ರೈಲ್ವೆ ಅಧಿಕಾರಿ ಅಂಕಿತಾ ವರ್ಮಾ ಮಾತನಾಡಿ, ‘ಅನಾಥರ, ಅಸಹಾಯಕರ ಜೊತೆಗೆ ನಾವೆಲ್ಲ ಇರಬೇಕು. ಕರ್ತವ್ಯದ ಸಂಗಡ ಸಮಾಜ ಪ್ರೀತಿ ಇದ್ದರೆ, ನಮ್ಮ ವೃತ್ತಿಗೆ ಇನ್ನೂ ಹೆಚ್ಚು ಘನತೆ ಬರುತ್ತದೆ’ ಎಂದರು.

ಸ್ವಧಾರಾದ ಮುಖ್ಯಸ್ಥೆ ಪರಿಮಳಾ ಜೈನ್ ಮಾತನಾಡಿ, ‘ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ ಎಂಬ ಒಂದೇ ಒಂದು ಸಂದೇಶ ಪ್ರತಿ ಮಹಿಳೆಗೆ ಇಂದು ಬೇಕಾಗಿದೆ. ಈ ದಿಕ್ಕಿನಲ್ಲಿ ನಮ್ಮ ಸಂಸ್ಥೆ ಸಂಕಷ್ಟಕ್ಕೀಡಾದ ಯಾವುದೇ ಮಹಿಳೆಗೆ ದಿನದ 24 ತಾಸು ಸಹಾಯ ಹಸ್ತ ಚಾಚುತ್ತದೆ ಎಂದರು. 

ಸಮಾರಂಭದಲ್ಲಿ ಹಿರಿಯ ನಾಗರಿಕ ಸೇವಾ ಇಲಾಖೆಯ ಮಲ್ಲಿಕಾರ್ಜುನ ಮಠದ, ಶರಣ ಸಾಹಿತ್ಯ ಪರಿಷತ್ತಿನ ಎಸ್.ಆರ್. ಹಿರೇಮಠ ಭಾಗವಹಿಸಿದ್ದರು. ಶಾಂತಾ ತಿರುಮಲೆ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಎ.ಎನ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು