ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ ಡಿ.17

7

ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ ಡಿ.17

Published:
Updated:

ಹಾವೇರಿ: ಸೇವಾ ಭದ್ರತೆ ಮತ್ತು ಸಮರ್ಪಕ ಸಂಬಳ ನೀಡುವಂತೆ ಆಗ್ರಹಿಸಿ ಡಿ.17ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಕೆ.ಪಾಟೀಲ್‌ ಹೇಳಿದರು.

ಅತಿಥಿ ಉಪನ್ಯಾಸಕರ ಬೇಡಿಕೆಗಳ ಕುರಿತು ಬೆಳಗಾವಿ ಅಧಿವೇಶನಲ್ಲಿ ಡಿ.13ರಂದು ಚರ್ಚೆಯಾಗಿತ್ತು. ಆದರೆ, ಬೇಡಿಕೆಗಳನ್ನು ಈಡೇರಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದು, ಖಂಡನೀಯ. ಹೇಳಿಕೆಯನ್ನು ವಿರೋಧಿಸಿ ಅಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಶನಿವಾರ ಪತ್ರಿಕಾಗೊಷ್ಠಿಯಲ್ಲಿ ಹೇಳಿದರು.

ನೆರೆಯ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ನೀಡುವ ಸೇವಾ ಭದ್ರತೆ, ಸಂಬಳ ಮತ್ತು ಸರ್ಕಾರಿ ಸೌಲಭ್ಯಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕು. ಉಮಾದೇವಿ ಪ್ರಕರಣವನ್ನು ತಿದ್ದುಪಡಿಗೊಳಿಸಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಿದ್ದು, ರಾಜ್ಯ ಸರ್ಕಾರವು ಅದನ್ನು ತಿದ್ದುಪಡಿ ಮಾಡಿ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಮುಖಂಡರಾದ ವಸಂತಗೌಡ ಪಾಟೀಲ, ಜಿಲ್ಲಾ ಮುಖಂಡರಾದ ಮಂಜುನಾಥ ಬಾರ್ಕಿ, ನಿಲಪ್ಪ ದೊಡ್ಡಮನಿ, ಸಿಕಂದರ್‌ ರಿತ್ತಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !