ರಾಣೆಬೆನ್ನೂರು: ಗಣೇಶನಗರದ ನಿವಾಸಿ ರಾಘವೇಂದ್ರ ಶಿವರಾಂ ಪಾಸ್ತೆ ಎಂಬುವವರಿಂದ ₹20 ಸಾವಿರ ಹಣ ಪಡೆಯುವಾಗ ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಶಂಭು ಮಹದೇವಪ್ಪ ಸೋಮನಹಳ್ಳಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ರಾಘವೇಂದ್ರ ಶಿವರಾಂ ಪಾಸ್ತೆ ಅವರು ತಮ್ಮ ತಂದೆ ಹೆಸರಿನ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ಅನುಕಂಪದ ಆಧಾರದ ಮೇಲೆ ತಮಗೆ ಮಂಜೂರು ಮಾಡಲು ಮನವಿ ಮಾಡಿದ್ದರು. ಅದಕ್ಕೆ ಆಹಾರ ನಿರೀಕ್ಷಕ ಶಂಭು ಮಹದೇವಪ್ಪ ₹ 20 ಸಾವಿರ ಹಣ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಬುಧವಾರ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಅಧೀಕ್ಷಕ ಎಂ. ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಿ.ಮಧುಸೂದನ ನೇತೃತ್ವದ ತಂಡ ಬಂಧಿಸಿದೆ. ಪೊಲೀಸ್ ನಿರೀಕ್ಷಕ ವಿಶ್ವನಾಥ ಕಬ್ಬೂರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.