ಭಾನುವಾರ, ಸೆಪ್ಟೆಂಬರ್ 26, 2021
28 °C

ರಾಣೆಬೆನ್ನೂರು: ಎಲ್ಲೆಡೆ ಸಂಭ್ರಮದ ನಾಗರಪಂಚಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ನಗರದ ವಿವಿಧ ಕಡೆಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಮತ್ತು ಮಕ್ಕಳು ಸಡಗರ ಹಾಗೂ ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು. ವಿವಿಧ ಬಗೆಯ ಉಂಡಿಗಳನ್ನು ಎಡೆ ಮಾಡಿ ಮಣ್ಣಿನ ನಾಗಪ್ಪನ ಮೂರ್ತಿಗೆ ಗುರುವಾರ ಶ್ರದ್ದಾ ಭಕ್ತಿಯಿಂದ ಹಾಲು ಎರೆದರು.

ಮಣ್ಣಿನಿಂದ ತಯಾರಿಸಿದ ಹಾವಿನ ಮೂರ್ತಿಗಳನ್ನು ಹಾಲು, ಅರಿಶಿನ, ಕುಂಕುಮ, ಗರಿಕೆ, ಶ್ರೀಗಂಧ, ಅಕ್ಷತೆ ಮತ್ತು ಹೂವುಗಳಿಂದ ಅಲಂಕರಿಸಿದ್ದರು. ದೇವರ ಕೋಣೆಯಲ್ಲಿ ನಾಗರ ಪ್ರತಿಮೆಯನ್ನು ಇಟ್ಟು ಪೂಜಿಸಿದರು. ತೆಂಗಿನಕಾಯಿಯ ಸಿಹಿತಿಂಡಿಗಳು, ಕಡಲೆ ಕಾಳು, ಕಪ್ಪು ಎಳ್ಳಿನ ಉಂಡೆಯನ್ನು ತಯಾರಿಸಿ ನಾಗ ದೇವರಿಗೆ ಅರ್ಪಿಸಿದರು.

ಇಲ್ಲಿನ ಆದಿಶಕ್ತಿ ಮತ್ತು ಚೌಡೇಶ್ವರಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನದ, ಕೊಟ್ಟೂರೇಶ್ವರಮಠ, ಕೋಟೆ, ಕುರುಬಗೇರಿ ಕಾಳಮ್ಮನ ಗುಡಿ, ಮೃತ್ಯುಂಜಯನಗರದ ಮೃತ್ಯುಂಜಯ ದೇವಸ್ಥಾನ, ಸಿದ್ದಾರೂಢಮಠ, ಬಸವಣ್ಣ ದೇವಸ್ಥಾನ, ಚತುರ್ಮುಖಿ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಮೌನೇಶ್ವರ ದೇವಸ್ಥಾನ, ತುಳಜಾಭವಾನಿ ಗುಡಿ, ಶನೈಶ್ಚರ ಮಂದಿರ, ವಾಗೀಶನಗರದ ವೀರಭದ್ರಸ್ವಾಮಿ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳು ಅಜ್ಜನ ಪಾಲು, ಅಮ್ಮನಪಾಲು, ಗುರುಹಿರಿಯರ ಪಾಲು, ಮಕ್ಕಳ ಪಾಲು ಎಂದು ಹೇಳುವ ಮೂಲಕ ಮಹಿಳೆಯರು ಮತ್ತು ಮಕ್ಕಳು ನಾಗಪ್ಪನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದರು. ನಂತರ ಮನೆ ಮಂದಿಯಲ್ಲ ಜೋಕಾಲಿ ಜೀಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.